ಆರ್‌ಎಸ್ಸೆಸ್ ಬ್ರಹ್ಮಚಾರಿಗಳ ಒಕ್ಕೂಟ: ಅಕ್ಬರುದ್ದೀನ್

ಮಂಗಳವಾರ, 3 ಮಾರ್ಚ್ 2015 (10:09 IST)
ಎಂಐಎಂ ಮುಖಂಡ ಅಕ್ಬರುದ್ದೀನ್ ಒವೈಸಿಗೆ ವಿವಾದ ಹೊಸದೇನಲ್ಲ. ಅವರು ಸೋಮವಾರ ಆರ್‌ಎಸ್ಸೆಸ್ ಬ್ರಹ್ಮಚಾರಿಗಳ  ಒಕ್ಕೂಟ ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರ ಪಕ್ಷ ಮಜ್ಲಿಸ್ ಇತ್ತೆಹುದುಲ್ ಮುಸ್ಲಿಮೀನ್ ಅಥವಾ ಎಂಐಎಂ ಹೈದರಾಬಾದ್ ಪಕ್ಷದ ಮುಖ್ಯಕಚೇರಿಯಲ್ಲಿ 57ನೇ ಸಂಸ್ಥಾಪನೆ ದಿನವನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚು ಮಕ್ಕಳನ್ನು ಹೆರಬೇಕೆಂದು ಸಲಹೆ ನೀಡುವವರು ಸ್ವತಃ ಬ್ರಹ್ಮಚಾರಿಗಳಾಗಿದ್ದು, ಈ ಪ್ರತಿಕ್ರಿಯೆ ನೀಡಲು ಅರ್ಹತೆ ಹೊಂದಿಲ್ಲ ಎಂದು ನುಡಿದರು.ಅವರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಮತ್ತು ಜೀವನದ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ ಇತರರಿಗೆ ಸಲಹೆ ನೀಡುತ್ತಾರೆ ಎಂದು ಹೇಳಿದರು. ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ಇತ್ತೀಚೆಗೆ ಪ್ರತಿಯೊಬ್ಬ ಹಿಂದೂ ಮಹಿಳೆ ನಾಲ್ಕು ಮಕ್ಕಳನ್ನು ಹೆರಬೇಕೆಂದು ಹೇಳಿದ್ದರು.

ಎಲ್ಲಾ ಮುಸ್ಲಿಮರು ಒಗ್ಗಟ್ಟಾಗಿರಬೇಕು ಮತ್ತು ತಮ್ಮ ಪಕ್ಷವು ಕೋಮುವಾದಿ ರಾಜಕೀಯದ ವಿರುದ್ಧ ಹೋರಾಟ ಮಾಡುತ್ತದೆ ಎಂದು ಹೇಳಿದರು. ಅವರು ಒಗ್ಗಟ್ಟಾಗಿರದಿದ್ದರೆ ಮುಸ್ಲಿಮರ ಗುರುತಿಸುವಿಕೆ ಅಪಾಯದಲ್ಲಿರುವ ಸಂಭವವಿದೆ ಎಂದರು.ಎಂಐಎಂ ದಲಿತರ ಉದ್ದಾರಕ್ಕೆ ಕೆಲಸಮಾಡುತ್ತಿದ್ದು, ಅವರ ಹಕ್ಕುಗಳಿಗಾಗಿ ಹೋರಾಡುತ್ತಿದೆ ಎಂದರು. ಕೆಲವು ಸ್ಥಳೀಯ ಚುನಾವಣೆಗಳಲ್ಲಿ ದಲಿತ ಅಭ್ಯರ್ಥಿಗಳನ್ನು ಎಂಐಎಂ ನಿಲ್ಲಿಸಿದೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ