ಆರೆಸ್ಸೆಸ್‌ನೊಂದಿಗೆ ರಾಜಕೀಯ ಚರ್ಚೆ ಮಾಡುವುದೇ ಇಲ್ಲ ಎಂದು ಸಚಿವ ನಿತಿನ್ ಗಡ್ಕರಿ

ಬುಧವಾರ, 20 ಮೇ 2015 (18:28 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೋದಿ ಸರಕಾರಕ್ಕೆ ಯಾವುದೇ ರೀತಿಯ ಒತ್ತೃಡ ತರುವುದಿಲ್ಲ ಅಥವಾ ಯಾವುದೇ ನಿರ್ದೇಶನ ಕೂಡಾ ನೀಡುವುದಿಲ್ಲ. ಮೋದಿ ಸಂಪುಟದ ಸಚಿವರು ಮುಕ್ತತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
 
ಮೋದಿ ಸಂಪುಟದ ಹಿರಿಯ ಸಚಿವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಬಾಗವತ್ ಅವರನ್ನು ಭೇಟಿ ಮಾಡುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರೆಸ್ಸೆಸ್ ರಾಷ್ಟ್ರದ ಹಿತಾಸಕ್ತಿ ಮತ್ತು ಶಿಕ್ಷಣದ ಬಗ್ಗೆ ಮಾತ್ರ ಹೆಚ್ಚಿನ ಆಸಕ್ತಿ ವಹಿಸುತ್ತದೆಯೇ ಹೊರತು ರಾಜಕೀಯದಲ್ಲಿ ಅಲ್ಲ ಎಂದು ತಿರುಗೇಟು ನೀಡಿದರು.
 
ಆರೆಸ್ಸೆಸ್ ನಾಯಕರೊಂದಿಗೆ ನಡೆದ ಸಭೆಗಳಲ್ಲಿ ಅಲ್ಪ ಪ್ರಮಾಣದ ಬಗ್ಗೆ ರಾಜಕೀಯ ಚರ್ಚೆ ನಡೆಯುತ್ತದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೇಂದ್ರ ಕಚೇರಿಯಲ್ಲಿದ್ದಾಗ ಮಾತ್ರ ಆಸಕ್ತರನ್ನು ಭೇಟಿ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 
 
ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಜನಾಥ್ ಸಿಂಗ್ ಮತ್ತು ಸಾವು ಆರೆಸ್ಸೆಸ್ ಸಂಘದ ಸದಸ್ಯರಾಗಿದ್ದು, ಭಾಗವತ್ ಅವರನ್ನು ಭೇಟಿ ಮಾಡಿದಾಗ ಮಾಧ್ಯಮಗಳಲ್ಲಿ ವರದಿಯಾದ ಶೇ.1 ರಷ್ಟು ಕೂಡಾ ರಾಜಕೀಯ ಚರ್ಚೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
 
ನಾನು ಆರೆಸ್ಸೆಸ್ ಸಂಘದ ಸದಸ್ಯನಾಗಿದ್ದೇನೆ. ಆರೆಸ್ಸೆಸ್ ಸದಸ್ಯ ಎಂದು ಹೇಳಲು ನಾನು ಭಯಪಡುವುದಿಲ್ಲ. ಆರೆಸ್ಸೆಸ್ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಅದರಂತೆ ಪಾರಿಕ್ಕರ್ ಮತ್ತು ರಾಜನಾಥ್ ಸಿಂಗ್ ಅವರಿಗೆ ಕೂಡಾ ಆರೆಸ್ಸೆಸ್ ಜೀವನದ ಅವಿಭಾಜ್ಯ ಅಂಗವಾಗಿದೆ. ಆರೆಸ್ಸೆಸ್ ನಮ್ಮ ಮೇಲೆ ಯಾವುದೇ ಒತ್ತಡ ತರುವುದಿಲ್ಲ ನಿರ್ದೆಶನ ಕೂಡಾ ನೀಡುವುದಿಲ್ಲ. ರಾಜಕೀಯದ ಬಗ್ಗೆ ಮಾತನಾಡುವುದು ತುಂಬಾ ಕಡಿಮೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ