ಇಂದಿನಿಂದ ಆರ್‌ಎಸ್ಎಸ್-ಬಿಜೆಪಿ ಸಮನ್ವಯ ಸಭೆ

ಬುಧವಾರ, 2 ಸೆಪ್ಟಂಬರ್ 2015 (09:22 IST)
ಇಂದಿನಿಂದ ಮೂರು ದಿನಗಳ ಕಾಲ ಬಿಜೆಪಿ ಹಾಗೂ ಆರ್‌ಎಸ್ಎಸ್ ನಡುವೆ ಸಮನ್ವಯ ಸಭೆ ನಡೆಯುತ್ತಿದ್ದು ಎನ್‌ಡಿಎ ಸರಕಾರದ ಒಂದು ವರ್ಷದ ಅವಧಿಯ ವಿಶ್ಲೇಷಣೆ, ಸರ್ಕಾರಕ್ಕೆ ಎದುರಾಗಿರುವ ಸಮಸ್ಯೆಗಳು, ಒಆರ್‌ಒಪಿ, ಪಟೇಲ್ ಸಮುದಾಯದ ಮೀಸಲಾತಿ ಹೋರಾಟ, ಧಾರ್ಮಿಕ ಪಂಗಡಗಳ ಜನಗಣತಿ ವಿಚಾರವಾಗಿ ಪ್ರಮುಖವಾಗಿ ಚರ್ಚೆಯಾಗಲಿದೆ.

ಸೆಪ್ಟೆಂಬರ್ 2 ರಿಂದ 4ರವರೆಗೆ ಸಭೆ ನಡೆಯಲಿದ್ದು  ಆರ್‌ಎಸ್ಎಸ್ ವರಿಷ್ಠ ಮೋಹನ್ ಭಾಗವತ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜ್‌ನಾಥ್‌ ಸಿಂಗ್,  ನಿತಿನ್ ಗಡ್ಕರಿ,  ಸುಷ್ಮಾ ಸ್ವರಾಜ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಸಂಘದ ಹಿರಿಯ ನಾಯಕರು ಮತ್ತು ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ವಕ್ತಾರರು ತಿಳಿಸಿದ್ದಾರೆ. 
 
ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಗಮನಾರ್ಹ ಅಂಶ . 

ವೆಬ್ದುನಿಯಾವನ್ನು ಓದಿ