ಬದಲಾದ ಕಾಲಕ್ಕೆ ತಕ್ಕಹಾಗೆ ಆರೆಸ್ಸೆಸ್ ವೇಷಭೂಷಣ ಬದಲು, ಚೆಡ್ಡಿ ಹೋಯ್ತು, ಪ್ಯಾಂಟು ಬಂತು

ಮಂಗಳವಾರ, 30 ಆಗಸ್ಟ್ 2016 (15:27 IST)
ಬದಲಾದ ಕಾಲಕ್ಕೆ ತಕ್ಕಹಾಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ವೇಷಭೂಷಣವೂ ಬದಲಾಗಲಿದೆ. ಆರ್‌ಎಸ್ಸೆಸ್ ಸೋಮವಾರ ತನ್ನ ಹೊಸ ಸಮವಸ್ತ್ರದ ಮಾರಾಟವನ್ನು ಪ್ರಾರಂಭಿಸಿದೆ. ವಿಜಯದಶಮಿ ದಿನ ಅಕ್ಟೋಬರ್ 11ರಂದು ಹೊಸ ಸಮವಸ್ತ್ರವನ್ನು ಅಳವಡಿಸಿಕೊಳ್ಳಲಾಗುತ್ತದೆ. 91 ವರ್ಷಗಳ ಸುದೀರ್ಘ ಕಾಲದ ಬಳಿಕ ಆರ್‌ಎಸ್ಸೆಸ್ ಕಾರ್ಯಕರ್ತರ ಚಡ್ಡಿ ಮಾಯವಾಗಿ ಪೂರ್ಣ ಉದ್ದದ ಪ್ಯಾಂಟ್ ಸಮವಸ್ತ್ರವಾಗಿ ಕಾಣಿಸಿಕೊಳ್ಳಲಿದೆ.
 
ನಾಗ್ಪುರದ ರೇಶಿಮ್‌ಬಾಗ್‌ನಲ್ಲಿರುವ ಆರ್‌ಎಸ್ಸೆಸ್ ಮುಖ್ಯಕಚೇರಿಯಲ್ಲಿ ಸೋಮವಾರ ಹೊಸ ಪ್ಯಾಂಟುಗಳ ಮೊದಲ ಬ್ಯಾಚನ್ನು ಮಾರಾಟಕ್ಕೆ ಇಡಲಾಗಿತ್ತು.
 
ಆರ್‌ಎಸ್ಸೆಸ್ ಟ್ರೇಡ್ ಮಾರ್ಕ್ ಚೆಡ್ಡಿಯ ಬದಲಾಗಿ ಕಂದು ಬಣ್ಣದ ಪ್ಯಾಂಟ್ ಸಮವಸ್ತ್ರದ ಇತರೆ ಭಾಗಗಳಾದ ಬಿಳಿಯ ಶರ್ಟ್, ಕಪ್ಪು ಟೋಪಿ, ಕಂದು ಸಾಕ್ಸ್ ಮತ್ತು ಬಿದಿರಿನ ಕೋಲಿನೊಂದಿಗೆ ಧರಿಸಲಾಗುತ್ತದೆ.
 
ಈ ವರ್ಷದ ಮಾ. 13ರಂದು ಆರ್‌ಎಸ್ಸೆಸ್ ತನ್ನ ನಾಗೋರ್ ಸಮಾವೇಶದಲ್ಲಿ ಈ ಬದಲಾವಣೆಯನ್ನು ಪ್ರಕಟಿಸಿದ್ದು, ವಿಜಯದಶಮಿ ದಿನವೇ ಕಾರ್ಯರೂಪಕ್ಕೆ ಬರಲಿದೆ. ಹೊಸ ಪ್ಯಾಂಟ್‌ಗಳ ಜತೆಗೆ 250 ರೂ. ಆಗಲಿದ್ದು, ಆರ್‌ಎಸ್ಸೆಸ್ ಕಾಯಂ ವಿನ್ಯಾಸಕಾರ ರಾಜಸ್ಥಾನದ ಅಕೋಲಾದಲ್ಲಿ ಅದನ್ನು ವಿನ್ಯಾಸಗೊಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ