ಆರೆಸ್ಸೆಸ್ ಮುಕ್ತ ಭಾರತ: ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಮುಖಂಡರ ವಾಗ್ದಾಳಿ

ಮಂಗಳವಾರ, 19 ಏಪ್ರಿಲ್ 2016 (12:01 IST)
ಭಾರತವನ್ನು ಆರೆಸ್ಸೆಸ್‌ನಿಂದ ಮುಕ್ತವಾಗಿಸಿ ಎಂದು ಕರೆ ನೀಡಿದ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು, ದೇಶವನ್ನು ಒಡೆಯುವಂತಹ ಸಿಮಿ, ಐಸಿಎಸ್ ಮತ್ತು ಎಲ್‌ಇಟಿಯಂತಹ ಉಗ್ರ ಸಂಘಟನೆಗಳ ಬಗ್ಗೆ ಯಾವತ್ತೂ ನಿತೀಶ್ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 
 
ಸಂಸದೀಯ ವ್ಯವಹಾರಗಳ ಖಾತೆ ಸಚಿವ ವೆಂಕಯ್ಯನಾಯ್ಡು ಮಾತನಾಡಿ, ದೇಶವನ್ನು ಹಾಳುಗೆಡುವಿದಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿತೀಶ್ ಕುಮಾರ್‌ಗೆ ತೊಂದರೆಯಿಲ್ಲ. ದೇಶದ ಅಭಿವೃದ್ಧಿಗೆ ಅಡ್ಡಿಯಾಗಿರುವ ಇಂತಹ ಕೋಮುವಾದಿ ,ಜಾತಿವಾದಿ ಮತ್ತು ಭ್ರಷ್ಟ ಶಕ್ತಿಗಳ ವಿರುದ್ಧ ಜನತೆ ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು.
 
ಬಿಜೆಪಿ ವಿರೋಧಿಗಳಿಗೆ ಆರೆಸ್ಸೆಸ್ ಮುಕ್ತ ಭಾರತ ಬೇಕಾಗಿದೆ. ಆದರೆ, ಪ್ರಧಾನಿಯವರಿಗೆ ದೇಶ ಬಡತನ, ಭ್ರಷ್ಟಾಚಾರ ಮತ್ತು ನಿರುದ್ಯೋಗ ಸಮಸ್ಯೆಯಿಂದ ಮುಕ್ತವಾಗಬೇಕಾಗಿದೆ ಎಂದರು.
 
ಕೋಮುವಾದಿ ,ಜಾತಿವಾದಿ ಮತ್ತು ಭ್ರಷ್ಟರು ಒಂದಾಗಿ ಬಿಜೆಪಿ ವಿರೋಧಿ ಬಣ ರಚಿಸಿ ದೇಶದ ಅಭಿವೃದ್ಧಿಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಇಂತಹ ವಿಚ್ಚಿದ್ರಕಾರಿ ಶಕ್ತಿಗಳ ಬಗ್ಗೆ ದೇಶದ ಜನತೆ ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು. 
 
ಆರೆಸ್ಸೆಸ್ ದೇಶದ ನಿಜವಾದ ದೇಶಭಕ್ತ ಸಂಘಟನೆಯಾಗಿದೆ. ದೇಶವನ್ನು ಒಡೆಯುವಂತಹ ಸಿಮಿ, ಐಸಿಎಸ್ ಮತ್ತು ಎಲ್‌ಇಟಿಯಂತಹ ಉಗ್ರ ಸಂಘಟನೆಗಳ ಬಗ್ಗೆ ಯಾವತ್ತೂ ನಿತೀಶ್ ಮಾತನಾಡುವುದಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ