ರೋಹಿತ್ ವೆಮುಲಾ ಹತ್ಯೆ ಮಾಡುವುದಾಗಿ ಆರೆಸ್ಸೆಸ್‌ನಿಂದ ಬೆದರಿಕೆ: ರಾಹುಲ್ ಗಾಂಧಿ

ಮಂಗಳವಾರ, 23 ಫೆಬ್ರವರಿ 2016 (19:45 IST)
ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ದಲಿತ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾನನ್ನು ಹಬತ್ಯೆ ಮಾಡುವುದಾಗಿ ಆರೆಸ್ಸೆಸ್ ಬೆದರಿಕೆಯೊಡ್ಡಿತ್ತು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
 
ರೋಹಿತ್ ವೆಮುಲಾ ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
  
ರೋಹಿತ್ ವೆಮುಲಾಗೆ ನ್ಯಾಯ ನೀಡುವಂತೆ ಒತ್ತಾಯಿಸಿ ಇಂದು ರಾಜಧಾನಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣ ಕೇಳಿದ್ದೇನೆ. ಅವರು ಸರಕಾರದ ಸಾಧನೆಯ ಬಗ್ಗೆ ಮಾತನಾಡಿದ್ದಾರೆಯೇ ಹೊರತು ರೋಹಿತ್ ಆತ್ಮಹತ್ಯೆ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಚಕಾರವೆತ್ತಲಿಲ್ಲ. ಇದು ಆರೆಸ್ಸೆಸ್ ಸಿದ್ಧಾಂತ. ಹಿಂದೆ ನಡೆದಿರುವುದನ್ನು ಮಾತನಾಡುತ್ತಾರೆ. ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ರೋಹಿತ್, ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದರು ಎಂದರು.
 
ರೋಹಿತ್ ತನ್ನ ಮೇಲೆ ನಡೆಯುತ್ತಿರುವ ಅನ್ಯಾಯ, ಶೋಷಣೆಗಳ ಬಗ್ಗೆ ದೇಶದ ಮುಂದಿಡಲು ಬಯಸಿದ್ದನು. ದೇಶದ ಭವಿಷ್ಯಕ್ಕಾಗಿ ಹೋರಾಟ ನಡೆಸಲು ಸಿದ್ದನಾಗಿದ್ದನು. ಆದರೆ, ಆರೆಸ್ಸೆಸ್‌ ಕೇವಲ ಗತಿಸಿಹೋದ ದಿನಗಳ ಬಗ್ಗೆ ಮಾತನಾಡುತ್ತಿದೆಯೇ ಹೊರತು ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಒಂದು ವೇಳೆ, ನೀನು ಭವಿಷ್ಯದ ಬಗ್ಗೆ ಮಾತನಾಡಿದಲ್ಲಿ ಹತ್ಯೆ ಮಾಡುವುದಾಗಿ ವೆಮುಲಾಗೆ ಆರೆಸ್ಸೆಸ್ ಬೆದರಿಕೆಯೊಡ್ಡಿತ್ತು ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ