ರಾಮಮಂದಿರ ನಿರ್ಮಾಣ ಕುರಿತಂತೆ ತಪ್ಪು ಮಾಹಿತಿ ಹರಡಿಸುವುದನ್ನು ತಡೆಯಲು ಆರೆಸ್ಸೆಸ್ ಚಿಂತನೆ

ಬುಧವಾರ, 10 ಫೆಬ್ರವರಿ 2016 (17:03 IST)
ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ರಾಮಮಂದಿರ ವಿಷಯ ಕುರಿತಂತೆ ತಪ್ಪು ಮಾಹಿತಿ ಹರಡಿಸುವುದನ್ನು ತಡೆಯಲು ಪದಾಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ರಾಷ್ಟ್ರೀಯ ಸ್ವಂಯಸೇವಕ ಸಂಘ ಹೇಳಿಕೆ ನೀಡಿದೆ.
 
ರಾಮ ಜನ್ಮಭೂಮಿ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಪ್ರಖರ ವಾದ ಮಂಡಿಸುತ್ತಿರುವ ಬಿಜೆಪಿ ಮುಖಂಡ ಮಾಜಿ ಕೇಂದ್ರ ಸಚಿವ ಸುಬ್ರಹ್ಮಣ್ಯಂ ಸ್ವಾಮಿ, ಫೆಬ್ರವರಿ 20 ರಂದು ನಡೆಯಲಿರುವ ಸೆಮಿನಾರ್‌ನಲ್ಲಿ ಆರೆಸ್ಸೆಸ್ ಹಿತೈಷಿಗಳಿಗೆ ಸಂಪೂರ್ಣವಾದ ವಿವರ ಒದಗಿಸಲಿದ್ದಾರೆ ಆರೆಸ್ಸೆಸ್ ಮುಖಂಡರು ತಿಳಿಸಿದ್ದಾರೆ.  
 
ಆರೆಸ್ಸೆಸ್‌ನ ಕಚೇರಿಯಾದ ದೀನ ದಯಾಳ್ ರಿಸರ್ಚ್ ಸೆಂಟರ್‌ನಲ್ಲಿ ಶ್ರೀ ರಾಮಮಂದಿರ ಸೆಮಿನಾರ್‌ ಆಯೋಜಿಸಲಾಗಿದೆ ಎಂದು ಆರೆಸ್ಸೆಸ್ ಪ್ರಕಟಿಸಿದೆ.
 
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಿಂದಿರುವ ಸತ್ಯಾಂಶಗಳ ಬಗ್ಗೆ ಬಿಜೆಪಿ ಮುಖಂಡ ಸ್ವಾಮಿ ಬೆಳಕು ಚೆಲ್ಲಲಿದ್ದಾರೆ. ಆರೆಸ್ಸೆಸ್ ಪದಾಧಿಕಾರಿಗಳು, ಹಿತೈಷಿಗಳು ಅದರ  ಲಾಭ ಪಡೆದು ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಮಾಹಿತಿ ಹರಡಿಸುವುದನ್ನು ನಿಲ್ಲಿಸಲು ನೆರವು ನೀಡುತ್ತಾರೆ ಎಂದು ಆರೆಸ್ಸೆಸ್ ಮಾಧ್ಯಮ ಉಸ್ತುವಾರಿ ಹೊತ್ತಿರುವ ರಾಜೀವ್ ಟುಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ