ಆರ್‌ಎಸ್ಎಸ್ ಮುಸ್ಲಿಂರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದೆ: ಶಿವಸೇನಾ

ಮಂಗಳವಾರ, 28 ಜೂನ್ 2016 (16:03 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಫ್ತಾರ್ ಕೂಟವನ್ನು ಆಯೋಜಿಸಲು ಪ್ರಯತ್ನಿಸುತ್ತಿರುವುದಕ್ಕೆ ಆಶ್ಚರ್ಯವನ್ನು ವ್ಯಕ್ತ ಪಡಿಸಿರುವ ಶಿವಸೇನೆ ಸಂಘವೀಗ ಮುಸ್ಲಿಂರನ್ನು ಸಮಾಧಾನ ಪಡಿಸಲು ಯತ್ನಿಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಇದು ತುಂಬ ಆಶ್ಚರ್ಯವನ್ನು ತರಿಸುವಂತದ್ದು, ಯಾಕೆಂದರೆ ಸಂಘ ಸದಾ ಹಿಂದೂ ರಾಷ್ಟ್ರ ಕಟ್ಟುವ ಬಗ್ಗೆ ಮಾತನ್ನಾಡುತ್ತದೆ. ಕಾಂಗ್ರೆಸ್ ಅಥವಾ ಇತರ ಪಕ್ಷಗಳು ಇಫ್ತಾರ್ ಕೂಟವನ್ನು ಆಯೋಜಿಸಿದ್ದಾಗ ಸಂಘ ಸದಾ ಖಂಡಿಸುತ್ತಿತ್ತು. ಈಗ ಅವರೇ ಇಫ್ತಾರ್ ಪಾರ್ಟಿಯನ್ನು ನಡೆಸುತ್ತಿದ್ದಾರೆ ಎಂದು ಶಿವಸೇನಾ ನಾಯಕಿ ಮನೀಶಾ ಕಾಯಂಡೆ ಟೀಕಿಸಿದ್ದಾರೆ. 
 
ಇದು ಇಲ್ಲಿಯವರೆಗೂ ತಮ್ಮಿಂದ ಖಂಡನೆಗೊಳಪಡುತ್ತಿದ್ದ ಮುಸ್ಲಿಮರನ್ನು ಸಮಾಧಾನಪಡಿಸುವ ಯತ್ನವೆಂಬಂತೆ ಭಾಸವಾಗುತ್ತಿದೆ. . ಒಂದು ಕಡೆ ಘರ್ ವಾಪ್ಸಿ ಬಗ್ಗೆ ಮಾತನ್ನಾಡುವ ಅವರು ಇನ್ನೊಂದು ಕಡೆ ಇಫ್ತಾರ್‌ನ್ನು ಆಯೋಜಿಸುತ್ತಿದ್ದಾರೆ. ಇದು ಬಲಪಂಥೀಯ ಸಂಘಟನೆ ತನ್ನ ಸಿದ್ಧಾಂತಗಳ ಬಗ್ಗೆಯೇ ಗೊಂದಲಕ್ಕೊಳಗಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಮನೀಶಾ ಕಾಯಂಡೆ ಪರಿಹಾಸ್ಯ ಮಾಡಿದ್ದಾರೆ. 
 
ಆರ್‌ಎಸ್ಎಸ್ ಅಂಗಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಸುಮಾರು 140 ದೇಶಗಳ ರಾಯಭಾರಿಗಳನ್ನು ಅಂತರಾಷ್ಟ್ರೀಯ ರೋಜಾ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿದ್ದರ ಹಿನ್ನೆಲೆಯಲ್ಲಿ ಸೇನೆ ಈ ರೀತಿ ಪ್ರತಿಕ್ರಿಯಿಸಿದೆ. 

ವೆಬ್ದುನಿಯಾವನ್ನು ಓದಿ