ಗ್ರಾಮವೊಂದನ್ನು ದತ್ತು ಪಡೆಯಲಿರುವ ಸಚಿನ್‌ ತೆಂಡೂಲ್ಕರ್‌

ಶುಕ್ರವಾರ, 17 ಅಕ್ಟೋಬರ್ 2014 (11:47 IST)
ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮವೊಂದನ್ನು ದತ್ತು ಪಡೆದು ಆ ಗ್ರಾಮದ  ಮೂಲಸೌಕರ್ಯ ಅಭಿವೃದ್ಧಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದಾರೆ. 

ಪ್ರಧಾನಿ ಮೋದಿಯವರು ಸ್ವಾತಂತ್ರ್ಯೋತ್ಸವದ ದಿನದಂದು ಪ್ರತಿಯೊಬ್ಬ ಸಂಸದರು ಗ್ರಾಮವೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದ್ದರು. ಪ್ರಧಾನಿ ಮೋದಿಯವರ ಈ ಆದರ್ಶ ಗ್ರಾಮ ಯೋಜನೆಯಲ್ಲಿ ಪಾಲ್ಗೊಳ್ಳಲು  ಕ್ರಿಕೆಟಿಗ ದಾಪುಗಾಲು ಹಾಕುತ್ತಿದ್ದಾರೆ. 
 
ಕಳೆದ ಗುರುವಾರ ಪತ್ನಿ ಸಮೇತರಾಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತನಾಡಿದ ಸಚಿನ್ ತಮ್ಮ ಈ ನಿರ್ಧಾರವನ್ನು ಮೋದಿಯವರಿಗೆ ತಿಳಿಸಿದ್ದಾರೆ. ಈ ಕುರಿತು ಪ್ರಧಾನಿ ತಮ್ಮ ಟ್ವಿಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. 
 
ಪ್ರಧಾನಿ ಮೋದಿಯವರ ಬಳಿ ತಾವು ಸ್ವಚ್ಛ ಭಾರತ ಯೋಜನೆಯಲ್ಲಿ ಕೂಡ ಸಕ್ರಿಯವಾಗಿ ಪಾಲ್ಗೊಂಡ ವಿಚಾರವನ್ನು ಸಚಿನ್ ಹಂಚಿಕೊಂಡಿದ್ದಾರೆ. 
 
ಕಳೆದ ಅಕ್ಟೋಬರ್ ಎರಡರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದ  ಪ್ರಧಾನಿಯವರು, ಇದರಲ್ಲಿ ಭಾಗಿಯಾಗುವಂತೆ ಸಚಿನ್‌ ಸೇರಿ ಕೆಲವರಿಗೆ ಆಹ್ವಾನ ನೀಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿನ್‌, ಮುಂಬೈನಲ್ಲಿ ತಂಡವೊಂದನ್ನು ಕಟ್ಟಿಕೊಂಡು ಅಭಿಯಾನದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ, ಇತರರು ಸಹ ಇದರಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದರು. 

ವೆಬ್ದುನಿಯಾವನ್ನು ಓದಿ