ಕಾಶ್ಮೀರ ಪ್ರವಾಹ: ಸಂತ್ರಸ್ತರಿಗೆ ಸ್ಪಂದಿಸಿದ ಕ್ರಿಕೆಟ್ ದೇವರು

ಶನಿವಾರ, 20 ಸೆಪ್ಟಂಬರ್ 2014 (17:40 IST)
ಮಾಜಿ ಕ್ರಿಕೆಟಿಗ ಮತ್ತು ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಜಮ್ಮು ಮತ್ತು ಕಾಶ್ಮೀರ ಪ್ರವಾಹ ಸಂತ್ರಸ್ತರಿಗೆ ರೂ .15 ಲಕ್ಷ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದಾರೆ.

ಅಲ್ಲದೇ ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ 25 ಲಕ್ಷ ರೂ ಮಂಜೂರು ಮಾಡಿದ್ದಾರೆ.
 
ವರದಿಗಳ ಪ್ರಕಾರ, ಎರಡು ಟ್ರಕ್ ತುಂಬಿದ ಜಲ ಶುದ್ಧಿಕಾರಕ( ವಾಟರ್ ಪ್ಯುರಿಫೈಯರ್), ಔಷಧಿ ಮತ್ತು ಇತರ ಅವಶ್ಯಕ ವಸ್ತುಗಳನ್ನೊಳಗೊಂಡ ಪರಿಹಾರ ಸಾಮಗ್ರಿಗಳು ಜಮ್ಮು ತಲುಪಿವೆ. 
 
ಪ್ರವಾಹದ ನೀರು ಕುಗ್ಗುತ್ತಿದೆಯಾದರೂ, ಜಮ್ಮು ಮತ್ತು ಕಾಶ್ಮೀರದ ಜನರು ಸಾಂಕ್ರಾಮಿಕ ಮತ್ತು ಜಲಜನ್ಯ ರೋಗಗಳ ಅಪಾಯಗಳನ್ನೆದುರಿಸುತ್ತಿದ್ದಾರೆ. 
 
ರಾಜಧಾನಿ ಶ್ರೀನಗರ ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶವನ್ನು  ಧ್ವಂಸಗೊಳಿಸಿದ ಭೀಕರ ಪ್ರವಾಹದಿಂದ ಲಕ್ಷಾಂತರ ಜನರು ನಿರಾಶ್ರಿತಗೊಂಡಿದ್ದಾರೆ.
 
ಮುಳುಗಡೆಯಾಗಿದ್ದ ಪ್ರದೇಶಗಳ ಜನರನ್ನು ರಕ್ಷಿಸಲು ಭಾರತೀಯ ಸೇನೆ ಹಗಲಿರುಳು ಶ್ರಮಿಸಿ ಸಾಮೂಹಿಕ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ