ಸಾಧ್ವಿ ಪ್ರಾಚಿ ವಿಎಚ್‌ಪಿ ನಾಯಕಿಯಲ್ಲ: ವಿಶ್ವ ಹಿಂದು ಪರಿಷತ್

ಮಂಗಳವಾರ, 1 ಮಾರ್ಚ್ 2016 (21:19 IST)
ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ವಿಶ್ವಹಿಂದೂ ಪರಿಷತ್‌ನ ನಾಯಕಿಯಲ್ಲ ಅಥವಾ ವಕ್ತಾರಳಲ್ಲ, ಸಂಘಟನೆಯ ಪದಾಧಿಕಾರಿಯೂ ಅಲ್ಲ ಎಂದು ವಿಎಚ್‌ಪಿ ಸ್ಪಷ್ಟನೆ ನೀಡಿದೆ 
 
ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ವಿಶ್ವಹಿಂದೂ ಪರಿಷತ್‌ನ ನಾಯಕಿಯಲ್ಲ ಅಥವಾ ವಕ್ತಾರಳಲ್ಲ, ಸಂಘಟನೆಯ ಪದಾಧಿಕಾರಿಯೂ ಅಲ್ಲ ಎಂದು ವಿಎಚ್‌ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಸಾಧ್ವಿ ಪ್ರಾಚಿ ರಾಜಕೀಯದಲ್ಲಿ ಬಿಜಿಯಾಗಿದ್ದು, ಹಿಂದೆ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಜೈನ್ ತಿಳಿಸಿದ್ದಾರೆ.
 
ಸಾಧ್ವಿ ಪ್ರಾಚಿ ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ರಾಜಕೀಯದಲ್ಲಿರುವುದರಿಂದ ವಿಎಚ್‌ಪಿ ಪದಾಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
 
ಆದ್ದರಿಂದ, ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿಯನ್ನು ವಿಶ್ವ ಹಿಂದೂ ಪರಿಷತ್ ನಾಯಕಿ ಎಂದು ಕರೆಯಬಾರದು ಎಂದು ವಿಎಚ್‌ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ