ಜೈಲಿನಲ್ಲಿ ಭೂಗತ ಜಗತ್ತಿನ ಅಬು ಸಲೇಂ ಬರೆಯುತ್ತಿದ್ದಾನೆ ಆತ್ಮಕಥೆ

ಶನಿವಾರ, 22 ನವೆಂಬರ್ 2014 (16:29 IST)
ಮುಂಬೈ ಭೂಗತಜಗತ್ತಿನ ಲೋಕದಲ್ಲಿ ಅಬು ಸಲೇಂ ವರ್ಣರಂಜಿತ ವ್ಯಕ್ತಿತ್ವದಿಂದ ಕೂಡಿದ್ದು, ಜೈಲಿನಲ್ಲಿ ತನ್ನ ಆತ್ಮಕಥೆಯನ್ನು ಬರೆಯಲು ಹೊರಟಿದ್ದಾನೆ. ಆದರೆ ಏಳನೇ ಕ್ಲಾಸ್ ಡ್ರಾಪ್‌ಔಟ್‌ಗೆ ಇಂಗ್ಲೀಷಿನಲ್ಲಿ ಕಥೆ ಬರೆಯಲು ನೆರವಾಗುತ್ತಿರುವವರು ಅವನ ಜೈಲಿನ ಸಹವರ್ತಿಗಳಿಬ್ಬರು.

ನೌಕಾಅಧಿಕಾರಿ ಎಮಿಲೆ ಜೆರೋಮ್ ಮತ್ತು ಇನ್ನೊಬ್ಬ ನಾವಿಕ ಮನಿಷ್ ಥಾಕೂರ್. ಆರ್ಥರ್ ರಸ್ತೆಯಲ್ಲಿ ಮೂವರ ನಡುವೆ ಹುಟ್ಟಿಕೊಂಡ ಸ್ನೇಹ ತಲೋಜಾ ಜೈಲಿಗೆ ಶಿಫ್ಟ್ ಮಾಡಿದ ಮೇಲೂ ಮುಂದುವರಿಯಿತು. 
 
 ಸಲೇಂ ಆತ್ಮಕಥೆಯನ್ನು ಚಿತ್ರವನ್ನಾಗಿಸಬೇಕೆಂಬ ಹಂಬಲ ಅವನಿಗಿದೆ. ವರದರಾಜ ಮುದಲಿಯಾರ್, ದಾವೂದ್ ಇಬ್ರಾಹಿಂ ಮತ್ತು ಹಾಜಿ ಮಸ್ತಾನ್ ಕಥೆಯನ್ನು ಆಧರಿಸಿದ ಚಿತ್ರಗಳಿರಬೇಕಾದರೆ ತನ್ನ ಚಿತ್ರ ಯಾಕೆ ಬರಬಾರದು ಎಂದು ಪ್ರಶ್ನಿಸುತ್ತಾನೆ. ಅಬು ಸಲೇಂ ತಾನು ಬಾಲಿವುಡ್‌ನ ಸಲ್ಮಾನ್ ಖಾನ್‌ಗಿಂತ ಚೆನ್ನಾಗಿ ಕಾಣುವುದಾಗಿ ಭಾವಿಸಿದ್ದು, ಸಲ್ಮಾನ್‌  ತನ್ನ ಪಾತ್ರವನ್ನು ತೆರೆಯ ಮೇಲೆ ನಿರ್ವಹಿಸುವಂತೆ ಬಯಸಿದರೂ ಆಶ್ಚರ್ಯವಿಲ್ಲ. 
 
 ಒಂದು ಹಂತದಲ್ಲಿ ಬಾಲಿವುಡ್ ಜಗತ್ತನ್ನು ಬೆಚ್ಚಿಬೀಳಿಸಿದ ಸಲೇಂ, ಗುಲ್ಷನ್ ಕುಮಾರ್, ಮನಿಷ್ ಕೊಯಿರಾಲಾ ಕಾರ್ಯದರ್ಶಿ ಅಜಿತ್ ದಿವಾನಿ  ಮೇಲೆ ದಾಳಿಗೆ ಸಂಚು ರೂಪಿಸಿದ ಸಲೇಂ ಚಿತ್ರಜಗತ್ತಿನ ಬಗ್ಗೆ ಪ್ರೀತೀ ಬೆಳೆಸಿಕೊಂಡಿದ್ದು ಹೇಗೆ? ಸಲೇಂ ತನ್ನನ್ನು ರೊಮ್ಯಾಂಟಿಕ್ ರಾಬಿನ್‌ಹುಡ್‌ನಂತೆ ಬಿಂಬಿಸಿಕೊಂಡು ಕಷ್ಟದಲ್ಲಿರುವವರಿಗೆ ನೆರವಾಗುತ್ತಾನೆ.

ವಕೀಲರಾಗಿದ್ದ ತಂದೆಯ ಸಾವಿನ ಬಳಿಕ ತನ್ನ ಕುಟುಂಬ ಅನುಭವಿಸಿದ ಕಷ್ಟವನ್ನು  ಸಲೇಂ ಹೇಳುತ್ತಾ, ತನ್ನ ತಾಯಿಯನ್ನು ಸಂತಸದಲ್ಲಿಡಲು ಹೇರಳ ಹಣ ಸಂಪಾದಿಸಲು ಯೋಚಿಸಿದ್ದಾಗಿ ಸಲೇಂ ಬರೆದಿದ್ದಾನೆ.  ಬಳಿಕ ಅಜಂಗಡ್ ತ್ಯಜಿಸಿ ಮುಂಬೈಗೆ ಬಂದು ಜೀವನದ ಹೊಸ ಪಯಣವನ್ನು ಹೊಸ ಕನಸಿನೊಂದಿಗೆ ಆರಂಭಿಸಿದ್ದಾಗಿ ಸಲೇಂ ಬರೆದಿದ್ದಾನೆ. 

ವೆಬ್ದುನಿಯಾವನ್ನು ಓದಿ