ಉತ್ತರಪ್ರದೇಶದಲ್ಲಿ ಅಸಹಿಷ್ಣುತೆ ಸ್ಥಿತಿ ಸೃಷ್ಟಿಯ ಹಿಂದೆ ಬಿಜೆಪಿ ಕೈವಾಡ: ಮುಲಾಯಂ ಸಿಂಗ್ ಯಾದವ್

ಗುರುವಾರ, 28 ಜನವರಿ 2016 (17:07 IST)
ದಾದ್ರಿ ಹತ್ಯೆ ಸೇರಿದಂತೆ ಹಲವು ಕೋಮು ಘಟನೆಗಳಲ್ಲಿ ಬಿಜೆಪಿ ನಾಯಕರ ಕೈವಾಡವಿರುವುದು ಸಾಬೀತಾಗಿದೆ. ಬಿಜೆಪಿ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿದೆ. ಆದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಕನಸು ನನಸಾಗುವುದಿಲ್ಲ ಎಂದು ಸಮಾಜಿ ವಾದಿ ಪಕ್ಷದ ಮುಖ್ಯಸ್ಥ ನರೇಶ್ ಅಗರ್‌ವಾಲ್ ತಿರುಗೇಟು ನೀಡಿದ್ದಾರೆ.
 
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೀಡಿದ ಹೇಳಿಕೆಯಂತೆ ದಾದ್ರಿ ಹತ್ಯೆಯಲ್ಲಿ ಬಿಜೆಪಿಯ ಮೂವರು ನಾಯಕರ ಸಂಚಿದೆ. ಮುಂಬರುವ 2017ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಕೋಮುವಾದ ಹರಡಿಸಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
 
ನೋಯಿಡಾದ ಮೊಹಮ್ಮದ್ ಅಖ್ಲಕ್‌ ಹತ್ಯೆ ಪ್ರಕರಣದಲ್ಲಿ ಮೂವರು ಬಿಜೆಪಿ ನಾಯಕರ ಕೈವಾಡವಿದೆ. ಒಂದು ವೇಳೆ, ಪ್ರಧಾನಿ ನರೇಂದ್ರ ಮೋದಿ ಬಯಸಿದಲ್ಲಿ ಹೆಸರುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಹೇಳಿಕೆ ನೀಡಿದ್ದರು.
  
ದಾದ್ರಿ ಹತ್ಯೆಯನ್ನು ಒಂದೇ ಪಕ್ಷದ ಮೂವರು ನಾಯಕರು ಸಂಚು ರೂಪಿಸಿದ್ದರು. ಮುಜಾಫರ್‌ನಗರ್ ಗಲಭೆಯಲ್ಲಿ ಬಿಜೆಪಿ ನಾಯಕರ ಸಂಚಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ