ಸಮಾಜವಾದಿ ಪಕ್ಷ ಪಂಕ್ಚರ್‌ ಆದ ಸೈಕಲ್‌ನಂತೆ: ರಾಹುಲ್ ಗಾಂಧಿ

ಭಾನುವಾರ, 18 ಸೆಪ್ಟಂಬರ್ 2016 (12:21 IST)
ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಪರಿವಾರದಲ್ಲಿ ಬಿಕ್ಕಟ್ಟು ಎದುರಾಗಿದ್ದಂತೆ, ಸಮಾಜವಾದಿ ಪಕ್ಷದ ಸೈಕಲ್ ಪಂಕ್ಚರ್ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
 
ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್ ಆಗಿದ್ದರಿಂದ ಸೈಕಲ್ ಪಂಕ್ಚರ್ ಆಗಿದೆ. ಇದೊಂದು ಗಾಳಿಯಿಲ್ಲದ ಸೈಕಲ್ ಟ್ಯೂಬ್‌ನಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪಂಕ್ಚರ್ ಆದ ಸೈಕಲ್‌ನ್ನು ನಡೆಸುತ್ತಿದ್ದಾರೆ. ಆದರೆ ಸೈಕಲ್ ಓಡುತ್ತಿಲ್ಲ. ಸೈಕಲ್ ಚೈನ್ ಕೂಡಾ ಕಳಚಿ ಹೋಗಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ಚಿಕ್ಕಪ್ಪ ಶಿವಪಾಲ್ ಯಾದವ್‌ರಿಂದ ಖಾತೆಗಳನ್ನು ಕಿತ್ತುಕೊಂಡ ಸಿಎಂ ಅಖಿಲೇಶ್, ಪಂಕ್ಚರ್ ಆದ ಸೈಕಲ್‌ನ್ನು ಬಿಸಾಕಿ ಲಕ್ನೋಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ