ಶಿಕ್ಷಕಿ ಮೇಲೆ ಸಮಾಜವಾದಿ ನಾಯಕ ಲೈಂಗಿಕ ದೌರ್ಜನ್ಯ

ಗುರುವಾರ, 20 ಅಕ್ಟೋಬರ್ 2016 (18:30 IST)
ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ನಾಯಕ ದಿಶಾಂತ್ ತ್ಯಾಗಿ ವಿರುದ್ಧ ಶಿಕ್ಷಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು ಎಫ್ಐಆರ್ ದಾಖಲಾಗಿದೆ. 
 
ಮುಂದಿನ ವರ್ಷ ನಡೆಯಲಿರುವ ವಿಧಾನಸಬಾ ಚುನಾವಣೆಗೆ ಮುರಾದ್ ನಗರದಿಂದ ಕಣಕ್ಕಿಳಿದಿರುವ ದಿಶಾಂತ್ ಮೊರ್ಟಾ ಗ್ರಾಮದಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ.
 
ಆ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕಿಯೊಬ್ಬರೀಗ ಸಮಾಜವಾದಿ ನಾಯಕ ಮತ್ತು ಆತನ ಸಹೋದರನ ವಿರುದ್ಧ ದೂರು ದಾಖಲಿಸಿದ್ದಾಳೆ.
 
ತನ್ನ ಕಚೇರಿಗೆ ಕರೆಸಿಕೊಂಡ ತ್ಯಾಗಿ ತನ್ನ ಗನ್ನರ್ ಮತ್ತು ಭದ್ರಾತಾಧಿಕಾರಿಯನ್ನು ಹೊರಕ್ಕೆ ಕಳುಹಿಸಿ ಆಕೆಗೆ ನಿನ್ನ ಕುಟುಂಬದ ವೆಚ್ಚವನ್ನು ಭರಿಸುವುದಾಗಿ ಆಮಿಷ ಒಡ್ಡಿದ. ಆಕೆ ಅದನ್ನು ನಿರಾಕರಿಸಿದಾಗ ಆಕೆಯ ಸೊಂಟ ಬಳಸಿ ಹಿಡಿದ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಆಶೀಸ್ ಶ್ರೀವಾತ್ಸವ್ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ