ಸಂಜಯ್ ದತ್‌ ಫೆಬ್ರವರಿ 25 ರಂದು ಬಿಡುಗಡೆ

ಮಂಗಳವಾರ, 23 ಫೆಬ್ರವರಿ 2016 (09:00 IST)
ಬಾಲಿವುಡ್‌ ಸ್ಟಾರ್ ಸಂಜಯ್‌ ದತ್‌ ಸೆರೆವಾಸಕ್ಕೆ ಫೆಬ್ರವರಿ 25ರಂದು ತೆರೆ ಬೀಳಲಿದೆ. ಗುರುವಾರ ಮುನ್ನಾಭಾಯ್ ಪುಣೆಯ ಯರವಾಡಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
 
1993, ಮಾರ್ಚ್ 12ರಂದು ನಡೆದ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದರಿಂದ ಅವರು ಜೈಲು ಸೇರಿದ್ದರು. ಅವರಿಗೆ ನ್ಯಾಯಾಲಯ 42 ತಿಂಗಳ ಅಂದರೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.  ವಿಚಾರಣಾಧೀನ ಕೈದಿಯಾಗಿ ಅವರು 18 ತಿಂಗಳು ಜೈಲುವಾಸ ಅನುಭವಿಸಿದ್ದರು. ಶಿಕ್ಷೆಯ ಅವಧಿ ಮುಗಿದಿದ್ದು, ಫೆಬ್ರವರಿ 25 ರಂದು ಬೆಳಗ್ಗೆ 9 ಗಂಟೆಗೆ ಸಂಜಯ್‌ ಬಿಡುಗಡೆ ಭಾಗ್ಯವನ್ನು ಕಾಣಲಿದ್ದಾರೆ.
 
ಮೊದಲೇ 18 ತಿಂಗಳು ಜೈಲಿನಲ್ಲಿ ಕಳೆದಿದ್ದರಿಂದ 42 ತಿಂಗಳು ಶಿಕ್ಷೆ ಅನುಭವಿಸಬೇಕಿತ್ತು. ಆದರೆ, ಶಿಕ್ಷೆ ಕಡಿತದ ನಿರ್ಧಾರದಿಂದಾಗಿ ಅವರು ಅವಧಿ ಮೊದಲೇ ಬಿಡುಗಡೆಯಾಗುತ್ತಿದ್ದಾರೆ.
 
ದತ್ ಅವರು 42 ತಿಂಗಳ ಪೈಕಿ 33 ತಿಂಗಳು 25 ದಿನ ಶಿಕ್ಷೆ ಅನುಭವಿಸದಂತಾಗುತ್ತದೆ. ಈ ಅವಧಿಯಲ್ಲಿ ತಲಾ ಎರಡು ಬಾರಿ ಪೆರೋಲ್‌ ಹಾಗೂ ಫರ್ಲೋ ರಜೆ ಮೇಲೆ ದತ್‌ ಅವರು ಜೈಲಿನಿಂದ ಹೊರಗಿದ್ದರು.
 

ವೆಬ್ದುನಿಯಾವನ್ನು ಓದಿ