ಮಿಶೆಲ್ ಒಬಾಮಾಗಾಗಿ ಕಡ್ಡಿಪೆಟ್ಟಿಗೆಯಲ್ಲಿ ಹಿಡಿಯಬಹುದಾದ ಸೀರೆ ಕೊಡುಗೆ

ಸೋಮವಾರ, 26 ಜನವರಿ 2015 (13:22 IST)
ಅಮೆರಿಕದ ಮೊದಲ ಮಹಿಳಾ ಪ್ರಜೆ ಮಿಶೆಲ್ ಒಬಾಮಾ ಅವರಿಗಾಗಿ ತೆಲಂಗಾಣದ ಸಿರ್‌ಸಿಲಾ ಪಟ್ಟಣದ 27 ವರ್ಷ ವಯಸ್ಸಿನ ನೇಕಾರನೊಬ್ಬ ಅಮೂಲ್ಯವಾದ ಕೊಡುಗೆ ನೀಡಲು ಸಿದ್ದತೆ ನಡೆಸಿದ್ದಾನೆ. 
 
ಗಣರಾಜ್ಯೋತ್ಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯ ಅತಿಥಿಗಳಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಪತ್ನಿ ನಿಶೆಲ್ ಒಬಾಮಾ ಭಾರತಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಅಭಿಮಾನಪೂರ್ವಕವಾಗಿ ಕೊಡುಗೆಗಳನ್ನು ಪಡೆಯಲಿದ್ದಾರೆ. 
 
ನೇಕಾರ ನಲ್ಲಾ ವಿಜಯ್ ಕಡ್ಡಿಪೆಟ್ಟಿಗೆಯಲ್ಲಿ ಹಿಡಿಯಬಹುದಾದ ಸೂಪರ್‌ಫೈನ್ ಸಿಲ್ಕ್ ಸೀರೆಯನ್ನು ಮಿಶೆಲ್ ಒಬಾಮಾಗಾಗಿ ಮತ್ತು ಬರಾಕ್ ಒಬಾಮಾ ಅವರಿಗೆ ಶಾಲನ್ನು ಕೊಡುಗೆಯಾಗಿ ನೀಡಲಿದ್ದಾರೆ. 
 
ಮಿಶೆಲ್‌ಗಾಗಿ ಸಿದ್ದಪಡಿಸಿದ ಸೀರೆ 60 ಗ್ರಾಂ ಭಾರವಾಗಿದ್ದು ನಾಲ್ಕುವರೆ ಮೀಟರ್ ಉದ್ದವಿದೆ. ಬರಾಕ್ ಒಬಾಮಾ ಅವರಿಗೆ ನೀಡಲಾದ ಶಾಲು 30 ಗ್ರಾಂ ಭಾರವಾಗಿದ್ದು ಎರಡು ಮೀಟರ್ ಉದ್ದವಿದೆ.  
 
ಎರಡು ಕೊಡುಗೆಗಳನ್ನು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರಿಗೆ ನೀಡಲಾಗುತ್ತಿದೆ. ನಂತರ ಅವರು ಕೊಡುಗೆಗಳನ್ನು ಪ್ರಧಾನಿ ಮೋದಿಯವರ ಸುರ್ಪದಿಗೆ ಒಪ್ಪಿಸಿ ಒಬಾಮಾ ದಂಪತಿಗಳಿಗೆ ನೀಡುವಂತೆ ನೇಕಾರ ನಲ್ಲಾ ವಿಜಯ್ ಮನವಿ ಮಾಡಿದ್ದಾರೆ.
 
 
 
 
 

ವೆಬ್ದುನಿಯಾವನ್ನು ಓದಿ