ಜಯಾ ಸಂಬಂಧಿಕರನ್ನು ದೂರವಿಡಿಸಿದ್ದ ಶಶಿಕಲಾ

ಶನಿವಾರ, 10 ಡಿಸೆಂಬರ್ 2016 (15:00 IST)
ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ತನ್ನ ಕುಟುಂಬದ ಬಗ್ಗೆ ಎಂದಿಗೂ ಮಾತನಾಡಿಲ್ಲ. ಆಕೆಯ ಸಂಬಂಧಿಕರು ಯಾರು ಎಂಬ ಕೂಡ ಸದಾ ಅವರು ರಹಸ್ಯವನ್ನೇ ಕಾಯ್ದುಕೊಂಡರು. ಸದಾ ಅವರಿಗಂಟಿರುತ್ತಿದ್ದುದು (ಇಂದು ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಇಟ್ಟುಕೊಂಡಿದ್ದಾಳೆ ಎಂದು ಹೇಳಲಾಗುತ್ತಿರುವ) ಸ್ನೇಹಿತೆ ಶಶಿಕಲಾ. 
ಮತ್ತೀಗ ದಿವಂಗತ ನಾಯಕಿಯ ಅವರ ಆಸ್ತಿ, ನಗದು ಮತ್ತು ಆಭರಣ ಯಾರಿಗೆ ಸೇರಬೇಕು ಎಂಬ ವಿವಾದಕ್ಕೆ ಸೇರ್ಪಡೆಯಾಗಿದ್ದಾರೆ ಬೆಂಗಳೂರಿನ ಹೊರವಲಯ ಕೆಂಗೇರಿಯಲ್ಲಿ ವಾಸವಾಗಿರುವ ಜಯಾ ಅವರ ಸಹೋದರಿ ಶೈಲಜಾ ಪುತ್ರಿ ಅಮೃತಾ.
 
ಜಯಲಲಿತಾ ಅವರು ತಮ್ಮ ಸಂಬಂಧಿಕರ ಜತೆ ಬೆರೆಯದೆ ದೂರ ಇಡುವಂತೆ ನೋಡಿಕೊಂಡಿದ್ದು ಶಶಿಕಲಾ ಎಂದು ಅವರು ಆರೋಪಿಸಿರುವ ಅಮೃತಾ ಜಯಾ ಆಸ್ತಿಯನ್ನೆಲ್ಲ ಸರ್ಕಾರಕ್ಕೆ ಒಪ್ಪಿಸಬೇಕು. ನಮ್ಮ ದೊಡ್ಡಮ್ಮನ ಆಸ್ತಿಯ ಮೇಲೆ ಶಶಿಕಲಾ ಅವರಿಗೆ ಯಾವ ಅಧಿಕಾರವೂ ಇಲ್ಲ. ಆಸ್ತಿಯನ್ನೆಲ್ಲ ಸರ್ಕಾರಕ್ಕೆ ಒಪ್ಪಿಸದರೆ ಅದನ್ನು ತಮಿಳುನಾಡು ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ. 
 
ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರನ್ನು ಭೇಟಿ ಮಾಡಲು ಕೊಡದಿದ್ದಕ್ಕೆ ಅತಿಯಾದ ನೋವು ವ್ಯಕ್ತ ಪಡಿಸಿರುವ ಅವರು, ಮೂರು ಬಾರಿ ಅಪೋಲೋ ಆಸ್ಪತ್ರೆ ಬಳಿ ತೆರಳಿದ್ದೆ. ಹೋದಾಗಲೆಲ್ಲ ಪೊಲೀಸರು ಅವರಿಗೆ ಇಲ್ಲಿ ಚಿಕಿತ್ಸೆ ಕೊಡಲಾಗುತ್ತಿಲ್ಲ. ಬೇರೆ ಕಡೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಾಪಸ್ ಕಳುಹಿಸಿದರು. ಅವರು ಸಾವನ್ನಪ್ಪಿದ ಸುದ್ದಿಯನ್ನು ಟಿವಿಯಲ್ಲಿ ನೋಡಿ ನನ್ನ ಕುಟುಂಬದ ಸದಸ್ಯರ ಜತೆ ಚೆನ್ನೈಗೆ ತೆರಳಿದೆ. ಆದರೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಕೂಡ ಬಿಡಲಿಲ್ಲ. ಬಳಿಕ ಡಿಎಂಕೆ ನಾಯಕರೋರ್ವರು ಬಹಳ ಪ್ರಯಾಸ ಪಟ್ಟು ನನ್ನನ್ನು ಅವರನ್ನು ನೋಡಿ ಪಾರ್ಥಿವ ಶರೀರದ ಬಳಿ ಕರೆದೊಯ್ದರು ಎಂದಿದ್ದಾರೆ ಅಮೃತ.
 

ವೆಬ್ದುನಿಯಾವನ್ನು ಓದಿ