ಶಶಿಕಲಾ ದಂಡ ಪಾವತಿಸದಿದ್ರೆ ಹೆಚ್ಚುವರಿಯಾಗಿ 13 ತಿಂಗಳ ಜೈಲುವಾಸ

ಮಂಗಳವಾರ, 21 ಫೆಬ್ರವರಿ 2017 (16:03 IST)
ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿಯಾಗಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ, ಸುಪ್ರೀಂಕೋರ್ಟ್ ವಿಧಿಸಿರುವ 10 ಕೋಟಿ ರೂ. ದಂಡ ಪಾವತಿಸುವಲ್ಲಿ ವಿಫಲವಾದಲ್ಲಿ ಹೆಚ್ಚುವರಿಯಾಗಿ 13 ತಿಂಗಳುಗಳ ಕಾಲ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
 
ಜೈಲಿನ ಮುಖ್ಯ ಅಧಿಕಾರಿ ಕೃಷ್ಣ ಕುಮಾರ್ ಹೇಳಿಕೆಯೊಂದನ್ನು ನೀಡಿ, ಒಂದು ವೇಳೆ ಶಶಿಕಲಾ ನಟರಾಜನ್, ಸುಪ್ರೀಂಕೋರ್ಟ್ ಹೇರಿರುವ 10 ಕೋಟಿ ರೂಪಾಯಿ ದಂಡ ಪಾವತಿಸದಿದ್ದಲ್ಲಿ, ಮತ್ತೆ 13 ತಿಂಗಳು ಕಾಲ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
 
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ,ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
 
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಫೆಬ್ರವರಿ 14 ರಂದು, ಶಶಿಕಲಾ ಮತ್ತು ಅವರ ಸಹಚರರಿಗೆ ನಾಲ್ಕು ವರ್ಷಗಳ ಶಿಕ್ಷೆ  ಮತ್ತು 10 ಕೋಟಿ ರೂ, ದಂಡ ವಿಧಿಸಿ ತೀರ್ಪು ನೀಡಿತ್ತು.
 
ವಿಚಾರಣಾ ನ್ಯಾಯಾಲಯದಲ್ಲಿ ಅಪರಾಧಿಯಾಗಿರುವ ಶಶಿಕಲಾ ಈಗಾಗಲೇ 21 ದಿನಗಳ ಶಿಕ್ಷೆಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರಿಂದ, ಇದೀಗ 3 ವರ್ಷ 11 ತಿಂಗಳು ಕಾಲ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿದೆ.
 
ಅಪರಾಧಿಗಳಾದ ಶಶಿಕಲಾ, ಇಳವರಸಿ ಮತ್ತು ಸುಧಾಕರನ್‌ರನ್ನು ಸಾಮಾನ್ಯ ಕೈದಿಯಂತೆ ಪರಿಗಣಿಸಲಾಗುತ್ತಿತ್ತು ಯಾವುದೇ ವಿಐಪಿ ಆತಿಥ್ಯ ನೀಡುತ್ತಿಲ್ಲ ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.  
 
ಭಧ್ರತಾ ಕಾರಣಗಳಿಂದಾಗಿ ಶಶಿಕಲಾ ಮತ್ತು ಇಳರಸಿಯನ್ನ ಒಂದೇ ಸೆಲ್‌ನಲ್ಲಿಡಲಾಗಿದೆ ಎಂದು ಜೈಲು ಸೂಪರಿಟೆಂಡೆಂಟ್ ಕೃಷ್ಣ ಕುಮಾರ್ ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ