ಸತ್ಯಂ ಕಂಪ್ಯೂಟರ್ಸ್ ಬಹುಕೋಟಿ ಹಗರಣ: ತಪ್ಪಿತಸ್ಥರಿಗೆ 7 ವರ್ಷ ಜೈಲು, ದಂಡ

ಗುರುವಾರ, 9 ಏಪ್ರಿಲ್ 2015 (15:49 IST)
ಸತ್ಯಂ ಕಂಪ್ಯೂಟರ್ ಕಮಪನಿಯ ಬಹುದೊಡ್ಡ ಹಗರಣಕೇಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಇಂದು ಕಂಪನಿಯ 10 ಮಂದಿ ಆರೋಪಿಗಳಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳಿಗೆಲ್ಲರಿಗೂ ಕೂಡ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. 
 
ಹಗರಣದ ಪ್ರಮುಖ ಆರೋಪಿ ಸಹೋದರರಾದ ಬಿ.ರಾಮಲಿಂಗರಾಜು ಹಾಗೂ ರಾಮರಾಜು ಅವರಿಗೆ ತಲಾ 5.5ಕೋಟಿ ರೂ ದಂಡ ವಿಧಿಸಿದ್ದು, 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 
 
ಇನ್ನು ಕಂಪನಿಯ ಅಧ್ಯಕ್ಷರಾಗಿದ್ದ ರಾಮಲಿಂಗರಾಜು ಅವರು ಪ್ರಕರಣದ ಕೇಂದ್ರ ಬಿಂದುವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜು ಈಗಾಗಲೇ 32 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದಂತಾಗಿದೆ. 
 
ಇನ್ನುಳಿದ 8 ಮಂದಿಗೂ ಕೂಡ ಜೈಲು ಶಿಕ್ಷೆ ವಿಧಿಸಲಾಗಿದೆಯಾದರೂ ಇವರು ದಂಡದಿಂದ ಸ್ವಲ್ಪ ಮುಕ್ತಿ ಪಡೆದಿದ್ದು, 25ಲಕ್ಷ ರೂ. ದಂಡ ಪಾವತಿಸಬೇಕಿದೆ. ಇತರೆ ಆರೋಪಿಗಳ ಪಟ್ಟಿಯಲ್ಲಿ ಕಂಪನಿಯ ಮಾಜಿ ಉದ್ಯೋಗಿಗಳಾದ ವಿ.ಶ್ರೀನಿವಾಸ್, ಪ್ರಭಾಕರ್ ಗುಪ್ತಾ ಹಾಗೂ ಶ್ರೀ ಶೈಲಂ ಸೇರಿದಂತೆ ಇತತರರು ಆರೋಪಿಗಳಾಗಿದ್ದಾರೆ. 
 
ಕಳೆದ ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ಇಂದು ತೀರ್ಪು ಪ್ರಕಟಿಸಿದ್ದು, ಮುಖ್ಯ ಆರೋಪಿ ರಾಮಲಿಂಗರಾಜು 7000ಕೋಟಿ ಅವ್ಯವಹಾರವನ್ನು ತಾನೇ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವು ಬೇಗ ಇತ್ಯರ್ಥವಾಗಿದೆ ಎನ್ನಲಾಗುತ್ತಿದೆ. 
 
ಈ ಪ್ರಕರಣದಲ್ಲಿ 7123 ಕೋಟಿ ರೂ. ಅವ್ಯವಹಾರ ನಡೆದಿದ್ದು, ಕಂಪನಿ ಸಂಸ್ಥಾಪಕ ಅಧ್ಯಕ್ಷ ಬಿ.ರಾಮಲಿಂಗಾರಾಜು ಹಾಗೂ ಅವರ ಸಹೋದ್ಯೋಗಿಗಳನ್ನು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2006ರ ಜನವರಿಯಲ್ಲಿ ದೂರು ದಾಖಲಾಗಿತ್ತು. ಬಳಿಕ ವಾದ ವಿವಾದಗಳನ್ನು ಆಲಿಸಿದ ಪರಿಣಾಮ 2009ರಲ್ಲಿ ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಷಯ ಬಹಿರಂಗಗೊಂಡಿತ್ತು.
 
ಈ ಕಂಪನಿಯಲ್ಲಿ ಕೆಲಸ ನಿರ್ಹಹಿಸುತ್ತಿದ್ದ 52 ಸಾವಿರ ಮಂದಿ ಉದ್ಯೋಗಿಗಳು ಕಂಪನಿಯಲ್ಲಿ 14000ಕೋಟಿ ಹಣ ಹೂಡಿಕೆ ಮಾಡಿದ್ದರು. ಆದರೆ ಬಳಿಕ ಹಣ ವಾಪಾಸಾಗದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದರು. 

ವೆಬ್ದುನಿಯಾವನ್ನು ಓದಿ