ಸೌದಿಯಲ್ಲಿ ಮನೆಸೇವಕಿಯ ಕೈ ಕತ್ತರಿಸಿದ ಘಟನೆ: ಸ್ವತಂತ್ರ ತನಿಖೆಗೆ ಭಾರತದ ಕರೆ

ಶುಕ್ರವಾರ, 9 ಅಕ್ಟೋಬರ್ 2015 (17:04 IST)
ಭಾರತೀಯ ಮಹಿಳೆಯ ಕೈಯನ್ನು ಸೌದಿಯ  ಮಾಲೀಕಳು  ಕತ್ತರಿಸಿದ ಆಘಾತಕಾರಿ ಘಟನೆ ಬಗ್ಗೆ ವಿದೇಶಾಂಗ ವ್ಯವಹಾರ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಘಟನೆ ವಿರುದ್ಧ ಸ್ವತಂತ್ರ ತನಿಖೆ ನಡೆಸಬೇಕು ಮತ್ತು ಆರೋಪಿ ವಿರುದ್ಧ ಹತ್ಯೆ ಪ್ರಯತ್ನದ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಒತ್ತಾಯಿಸಿದೆ. ರಿಯಾದ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಸಕ್ರಿಯವಾಗಿ ಈ ವಿಷಯ ಕುರಿತು ಸೌದಿ ಅಧಿಕಾರಿಗಳ ಜತೆ ವಿಚಾರವಿನಿಮಯ ನಡೆಸುತ್ತಿದೆ ಎಂದು ಎಂಇಎ ಅಧಿಕೃತ ವಕ್ತಾರ ವಿಕಾಸ್ ಸ್ವರೂಪ್ ಹೇಳಿದರು. 
 
ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜತೆ ನಾವು ಈ ವಿಷಯ ಎತ್ತಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದು ಹೇಳಿದ ಅವರು ಪೊಲೀಸ್ ಮುಖ್ಯಸ್ಥರು ಈ ಘಟನೆಯ ಬಗ್ಗೆ ಶೀಘ್ರ ತನಿಖೆಗೆ ಭರವಸೆ ನೀಡಿದ್ದಾರೆ.

 ಎಂಇಎ ಮತ್ತು ರಿಯಾದ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ದುರ್ದೈವಿಯ ಸ್ಥಿತಿಯ ಬಗ್ಗೆ ನಿಗಾವಹಿಸಿದೆ. ಸೌದಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮನೆಸೇವಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮನೆಯ ಒಡತಿ ಅವಳ ಬಲಗೈಯನ್ನು ಕತ್ತರಿಸಿದ್ದರಿಂದ ಅವಳು ಕುಸಿದುಬಿದ್ದಿದ್ದಳು. 
 

ವೆಬ್ದುನಿಯಾವನ್ನು ಓದಿ