ಆಸಿಡ್ ದಾಳಿಗೊಳಗಾದವರಿಗೆ ಖಾಸಗಿ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆ: ಸುಪ್ರೀಂಕೋರ್ಟ್ ಆದೇಶ

ಶುಕ್ರವಾರ, 10 ಏಪ್ರಿಲ್ 2015 (19:19 IST)
ದೇಶಾದ್ಯಂತವಿರುವ ಖಾಸಗಿ ಆಸ್ಪತ್ರೆಗಳು ಆಸಿಡ್ ದಾಳಿಗೊಳಗಾದವರಿಗೆ ಕೂಡಲೇ ಉಚಿತ ಚಿಕಿತ್ಸೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಆಸಿಡ್ ದಾಳಿಗೊಳಗಾದವರಿಗೆ ಉಚಿತ ಚಿಕಿತ್ಸೆ ನೀಡುವುದರೊಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಾದಲ್ಲಿ ಅದನ್ನು ಕೂಡಾ ನಡೆಸಬೇಕು ಎಂದು ಆದೇಶ ನೀಡಿದೆ.

ಖಾಸಗಿ ಆಸ್ಪತ್ರೆಗಳು ಆಸಿಡ್ ದಾಳಿಗೊಳಗಾದವರಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಸಂಪೂರ್ಣ ಪ್ರಮಾಣ ಪತ್ರಗಳನ್ನು ನೀಡಿದಲ್ಲಿ ಮುಂದೆ ಸರಕಾರದ ಪರಿಹಾರ ಹಣ ಪಡೆಯಲು ನೆರವಾಗುತ್ತದೆ ಎಂದು ತಿಳಿಸಿದೆ.

ಆಸಿಡ್ ದಾಳಿಗೊಳಗಾದವರಿಗೆ ರಾಜ್ಯ ಸರಕಾರಗಳು 3 ಲಕ್ಷ ರೂಪಾಯಿ ಪರಿಹಾರ ಆರ್ಥಿಕ ನೆರವು ನೀಡಬೇಕು ಎಂದಿದೆ.

ದೇಶದಲ್ಲಿನ ಖಾಸಗಿ ಆಸ್ಪತ್ರೆಗಳು ಆಸಿಡ್ ದಾಳಿಗೊಳಗಾದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದರೊಂದಿಗೆ ಉಚಿತ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ ಎಂದು ಕೇಂದ್ರ ಸರಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ.

ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಕಳ ವಿರುದ್ಧ ಭಾರಿ ದಂಡ ಹಾಗೂ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ.

ವೆಬ್ದುನಿಯಾವನ್ನು ಓದಿ