ಸೀಟು ಹಂಚಿಕೆ ಗೊಂದಲ ಮುಗೀತು, ಸಿಎಂ ಹುದ್ದೆಗೆ ಪೈಪೋಟಿ ಶುರುವಾಯ್ತು

ಮಂಗಳವಾರ, 23 ಸೆಪ್ಟಂಬರ್ 2014 (14:58 IST)
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಸೀಟು ಹಂಚಿಕೆ ಗೊಂದಲ ನಿವಾರಣೆಯಾಗಿದ್ದು, 151 ಕ್ಷೇತ್ರಗಳಲ್ಲಿ ಶಿವಸೇನೆ ಮತ್ತು ಬಿಜೆಪಿಗೆ 130 ಸ್ಥಾನಗಳನ್ನು ಬಿಟ್ಟುಕೊಡಲು ಶಿವಸೇನೆ ನಿರ್ಧರಿಸಿದೆ. ಮಿತ್ರಪಕ್ಷಗಳಿಗೆ 7 ಸ್ಥಾನಗಳನ್ನು ಬಿಟ್ಟುಕೊಡಲಿದ್ದಾರೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಹೊಸಬೇಡಿಕೆಯನ್ನು ಉದ್ಧವ್ ಠಾಕ್ರೆ ಮಂಡಿಸಿದ್ದಾರೆ.

ಸೀಟು ಹಂಚಿಕೆ ಗೊಂದಲ ನಿವಾರಣೆಯಾಯಿತೆಂದು ನಿಟ್ಟುಸಿರು ಬಿಡುವಷ್ಟರಲ್ಲಿ ಶಿವಸೇನೆ ಮೈತ್ರಿಪಕ್ಷಗಳು ಗೆದ್ದರೆ  ಮುಖ್ಯಮಂತ್ರಿ ಹುದ್ದೆಯನ್ನು ಉದ್ಧವ್ ಠಾಕ್ರೆಗೆ ನೀಡಬೇಕೆಂದು ಬೇಡಿಕೆ ಮಂಡಿಸುವ ಮೂಲಕ ಮತ್ತೊಮ್ಮೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದೆ.

ಶಿವಸೇನೆ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದು ರಾಜ್ಯದ ಬಿಜೆಪಿ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನಾವಿಸ್, ಏಕನಾಥ್ ಖಡ್ಸೆ ಮುಂತಾದವರು ಮುಖ್ಯಮಂತ್ರಿಯ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ