ನರೇಂದ್ರ ಮೋದಿಯ ಯಶಸ್ಸಿನ ಸೀಕ್ರೆಟ್‌ಗಳು ಕೆಳಗಿವೆ ಓದಿ

ಸೋಮವಾರ, 19 ಮೇ 2014 (11:07 IST)
ದೇಶದ ಮುಂದಿನ ಪ್ರಧಾನಮಂತ್ರಿಗಳಾಗಿ ಪಟ್ಟಕ್ಕೆ ಏರಲಿರುವ ನರೇಂದ್ರ ಮೋದಿಯ ಯಶಸ್ಸಿನ ಗುಟ್ಟೇನು? ನರೇಂದ್ರ ಮೋದಿ ತಮ್ಮ ಪ್ರಚಾರ ತಂತ್ರದ ಮೂಲಕ ಇಡೀ ಭಾರತದಲ್ಲಿ ಮೋದಿ ಅಲೆಯನ್ನು ಹರಡಿದರು.ಈ ಮೂಲಕ ಬಿಜೆಪಿಯನ್ನು ಕೇಂದ್ರಸರ್ಕಾರದಲ್ಲಿ ಅಧಿಕಾರದ ಗದ್ದುಗೆಗೆ ತಂದರು. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಆರ್‌ಎಸ್‌ಎಸ್ ಪ್ರಚಾರಕರಾಗಿ ಸೇರಿದ ಬಳಿಕ ರಾಜಕೀಯದ ಬಗ್ಗೆ  ಮೋದಿ ಹೆಚ್ಚಾಗಿ ತಿಳಿದುಕೊಂಡರು. ಮೋದಿ ಹೊಸ ಐಡಿಯಾಗಳ ಹರಿಕಾರರಾಗಿದ್ದರು. ವಿಜ್ಞಾನ ತಂತ್ರಜ್ಞಾನದ ಬಗ್ಗೆ ಹೆಚ್ಚು ಅರಿವು ಇವರಿಗಿದೆ.

ಉತ್ತಮ ವಾಗ್ಮಿಯೂ ಆಗಿರುವ ಮೋದಿ ಸ್ವತಃ ಅದ್ಭುತ ಸಾಧಕರು ಎಂದು ರುಜುವಾತು ಮಾಡಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ಇಂಟರ್ನೆಟ್ ಆನ್ ಮಾಡ್ತಾರೆ, ಯಾರು ಯಾರು ತಮ್ಮ ಬಗ್ಗೆ ಏನು ಮಾತನಾಡಿದ್ದಾರೆಂದು ಪ್ರತಿದಿನ ನೆಟ್‌ನಲ್ಲಿ ನೋಡ್ತಾರೆ. ಪ್ರವಾಸದಲ್ಲಿದ್ದಾಗ ಪತ್ರಿಕೆಗಳನ್ನು ತರಿಸಿಕೊಂಡು ಓದ್ತಾರೆ. ಮೋದಿ ಹಣದ ವಿಷಯಕ್ಕೆ ಬಂದ್ರೆ ಪಕ್ಕಾ ಜಿಪುಣರು. ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಎಷ್ಟು ಹಣ ಬೇಕೋ ಅಷ್ಟು ಬಿಡುಗಡೆ ಮಾಡ್ತಾರೆ. ಮೋದಿಗೆ ಇಂಗ್ಲೀಷ್ ಭಾಷೆ ಅಷ್ಟಾಗಿ ಬರೋಲ್ಲ.  ಮೋದಿಗೆ ಗರಿಗರಿಯಾದ ಇಸ್ತ್ರಿ ಬಟ್ಟೆಯೇನ್ನೇ ಧರಿಸುತ್ತಾರೆ.

ಮೋದಿಯೂ ಉಪವಾಸ ವೃತ ಆಚರಿಸುತ್ತಾರೆ. ಪಕ್ಕಾ ಸಂಪ್ರದಾಯವಾದಿಯಾಗಿದ್ದು, ನವರಾತ್ರಿ ಸಮಯದಲ್ಲಿ ಪೂರ್ತಿ 9 ದಿನ ಉಪವಾಸವಿದ್ದು, ದೇವರ ಪೂಜೆ ಮಾಡ್ತಾರೆ. ಮಾತೆ ಅಂಬಾ ಭವಾನಿಗಾಗಿ 79 ಕೋಟಿ ವೆಚ್ಚದಲ್ಲಿ ದೇವಾಲಯ ಕಟ್ಟಿಸಿದ್ದಾರೆ. ಕೆಲವೊಂದು ನಿರ್ಣಯ ತೆಗೆದುಕೊಳ್ಳುವಾಗ ಸ್ವಂತವಾಗಿ ಆಲೋಚನೆ ಮಾಡಿ ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ.  ನೆಟ್ ನೋಡಿದ ಬಳಿಕ ಸಚಿವರನ್ನು ಕರೆದು ಅವರೊಂದಿಗೆ ಚರ್ಚೆ ಮಾಡ್ತಾರೆ. ಮೋದಿಯ ಕಾರಿನಲ್ಲಿ ಮೇಕಪ್ ಕಿಟ್‌ಗಳು ಇರುತ್ತವೆ. ಎಲ್ಲಿ ಭಾಷಣಕ್ಕೆ ಹೋಗ್ತಾರೊ ಅಲ್ಲಿನ ಸಂಪ್ರದಾಯಗಳ ರೀತ್ಯ ಮೇಕಪ್ ಮಾಡ್ತಾರೆ.

ಮೋದಿ ಸ್ವತಃ ಸಾಹಿತಿಯೂ ಹೌದು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ನರೇಂದ್ರ ಮೋದಿ ಚಿಕ್ಕವರಿದ್ದಾಗ ಒಂದು ದಿನ ಸಾಧನೆ ಮಾಡ್ತೀನಿ ಎಂದು  ಊರು ಬಿಟ್ಟು ಹೋಗಿದ್ದರಂತೆ. ಅಷ್ಟಕ್ಕೂ ಅವರು ಹೋಗಿದ್ದು ಎಲ್ಲಿಗೆ ಅಂತ ಗೊತ್ತಾ? ಯಾವ ಸಾಧನೆ ಎಂದು ಗೊತ್ತಿರದೇ ಇಡೀ ಭಾರತವನ್ನು ಅವರು ಸುತ್ತಿದರು.  ಆಧ್ಯಾತ್ಮದಲ್ಲೂ ಅತೀವ ಆಸಕ್ತಿಯನ್ನು ಮೋದಿ ಬೆಳೆಸಿಕೊಂಡರು.  ಗುಜರಾತಿ ಊಟ ಎಂದರೆ ನರೇಂದ್ರ ಮೋದಿಗೆ ತುಂಬಾ ಇಷ್ಟ. ಸ್ವಾದಿಷ್ಟ, ರುಚಿಕರ ಅಡುಗೆ ಮಾಡುವುದರಲ್ಲೂ ಮೋದಿ ಎತ್ತಿದ ಕೈ. ಆಧ್ಯಾತ್ಮಿಕದ ಬಗ್ಗೆ ಮೋದಿಗೆ ಆಸಕ್ತಿಯಿದೆ.

ಹಲವು ಸಾಧು, ಸಂತರನ್ನು ಅವರು ಭೇಟಿ ಮಾಡಿದ್ದರು. ಮೋದಿ ಒಬ್ಬ ಹಾರ್ಡ್ ವರ್ಕರ್. ತಮ್ಮ ರಾಜಕೀಯ ಗುರಿ ಮುಟ್ಟಲು ಅಧಿಕಾರಿಗಳನ್ನು ಟೂಲ್‌ಗಳಂತೆ ಬಳಸಿಕೊಳ್ತಾರೆ. ಕಠಿಣ ಪರಿಶ್ರಮದಿಂದ ತಮಗೆ ಬೇಕಾದ ಕೆಲಸವನ್ನು ಮಾಡಿಕೊಳ್ತಾರೆ.

ವೆಬ್ದುನಿಯಾವನ್ನು ಓದಿ