ಆರ್‌ಜೆಡಿ ಪಕ್ಷವನ್ನು ತೊರೆದು ಮುಲಾಯಂ ಪಕ್ಷಕ್ಕೆ ರಘುನಾಥ್ ಝಾ ಸೇರ್ಪಡೆ

ಗುರುವಾರ, 3 ಸೆಪ್ಟಂಬರ್ 2015 (19:52 IST)
ಬಿಹಾರ್ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಭಾರಿ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿವೆ. ಇದೀಗ ಆರ್‌ಜೆಡಿ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ರಘುನಾಥ್ ಝಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಲಾಯಂ ಪಕ್ಷದ ಕೈ ಹಿಡಿದಿದ್ದಾರೆ. 
 
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಕುಟುಂಬದ ಸದಸ್ಯರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಲು ಹಿರಿಯ ನಾಯಕರನ್ನು ಕಡೆಗೆಣಿಸುತ್ತಿದ್ದಾರೆ ಎಂದು ಝಾ ಆರೋಪಿಸಿದ್ದಾರೆ. 
 
ಕಳೆದ 1990ರಲ್ಲಿ ಜನತಾ ದಳ ಸರಕಾರ ಅಧಿಕಾರಕ್ಕೆ ಬಂದಾಗ ರಘುನಾಥ್ ಝಾ ಕೂಡಾ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಅಕಸ್ಮಿಕವಾಗಿ ಬಂದ ಲಾಲು ಪ್ರಸಾದ್ ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸುವಲ್ಲಿ ಯಶಸ್ವಿಯಾದರು.     
 
ಆರ್‌ಜೆಡಿ ಪಕ್ಷದ ಬ್ರಾಹ್ಮಣ ಸಮುದಾಯದ ನಾಯಕರಾಗಿ ಹೊರಹೊಮ್ಮಿದ್ದ ಝಾ, ಆರೋಗ್ಯ ಸಚಿವರಾಗಿ , ಕೈಗಾರಿಕೆ ಸಚಿವರಾಗಿ ಮತ್ತು ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಾರ್ವಜನಿಕ ಉದ್ಯಮ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
 

ವೆಬ್ದುನಿಯಾವನ್ನು ಓದಿ