ಸೆನ್ಸೆಕ್ಸ್: ಲಾಭದಾಯಕ ವಹಿವಾಟಿನಿಂದ ಸೂಚ್ಯಂಕ ಕುಸಿತ

ಮಂಗಳವಾರ, 13 ಅಕ್ಟೋಬರ್ 2015 (13:33 IST)
ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 75 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 175.40 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 75.45 ಪಾಯಿಂಟ್‌ಗಳ ಇಳಿಕೆ ಕಂಡು 26,828.66 ಅಂಕಗಳಿಗೆ ತಲುಪಿದೆ.
 
ಉಕ್ಕು, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ವಾಹನೋದ್ಯಮ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಅದರಂತೆ, ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 22.90 ಪಾಯಿಂಟ್‌ಗಳ ಇಳಿಕೆ ಕಂಡು 8,120.70 ಅಂಕಗಳಿಗೆ ತಲುಪಿದೆ.
 
ಚಿಲ್ಲರೆ ಹಣದುಬ್ಬರ ದರ ಸೆಪ್ಟೆಂಬರ್ ತಿಂಗಳಲ್ಲಿ ಶೇ..4.41 ಕ್ಕೆ ತಲುಪಿರುವುದು ಶೇರುಪೇಟೆಯ ಮೇಲೆ ಋುಣಾತ್ಮಕ ಪ್ರಭಾವ ಬೀರಿದೆ ಎಂದು ಮೂಲಗಳು ತಿಳಿಸಿವೆ.
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ,0.23 ರಷ್ಟು ಕುಸಿತ ಕಂಡಿದೆ. ಶಾಂಘೈ ಶೇರುಪೇಟೆ ಶೇ.0.30 ರಷ್ಟು ಇಳಿಕೆಯಾಗಿದೆ. ಏತನ್ಮಧ್ಯೆ, ಜಪಾನ್‌ನ ನಿಕೈ ಶೇರುಪೇಟೆ ಕೂಡಾ ಶೇ.0.93 ರಷ್ಟು ಕುಸಿದಿದೆ.

ವೆಬ್ದುನಿಯಾವನ್ನು ಓದಿ