ಗ್ರೀಸ್ ಆರ್ಥಿಕ ಕುಸಿತ: ಬ್ಲ್ಯೂ-ಚಿಪ್ ಶೇರುಗಳ ಖರೀದಿಯಿಂದ ಚೇತರಿಕೆ ಕಂಡ ಸೂಚ್ಯಂಕ

ಮಂಗಳವಾರ, 30 ಜೂನ್ 2015 (20:39 IST)
ಹೂಡಿಕೆದಾರರು ಟಾಟಾ ಸ್ಟೀಲ್, ಸನ್ ಫಾರ್ಮಾ ಮತ್ತು ಕೋಲ್ ಇಂಡಿಯಾ ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 135 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಗ್ರೀಸ್ ದೇಶದ ಆರ್ಥಿಕ ಮುಗ್ಗರಿಸುವಿಕೆಯ ಮದ್ಯೆಯೂ ಏಷ್ಯಾ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 135.68 ಪಾಯಿಂಟ್‌ಗಳ ಏರಿಕೆ ಕಂಡು 27,814.53 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 50.10 ಪಾಯಿಂಟ್‌ಗಳ ಏರಿಕೆಯಾಗಿ  8,368.50 ಅಂಕಗಳಿಗೆ ತಲುಪಿದೆ.
 
ಕೆಲ ಆಯ್ದ ಬ್ಲ್ಯೂ-ಚಿಪ್ ಶೇರುಗಳ ಖರೀದಿಗೆ ಹೂಡಿಕೆದಾರರು ಮುಂದಾಗಿದ್ದರಿಂದ ಏಷ್ಯಾ ಮಾರುಕಟ್ಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ