ಬ್ಲ್ಯೂ-ಚಿಪ್ ಶೇರುಗಳ ಖರೀದಿ: 164 ಪಾಯಿಂಟ್‌ಗಳ ಚೇತರಿಕೆ ಕಂಡ ಸೂಚ್ಯಂಕ

ಶುಕ್ರವಾರ, 12 ಫೆಬ್ರವರಿ 2016 (14:14 IST)
ಬ್ಲೂ-ಚಿಪ್ ಶೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 164 ಪಾಯಿಂಟ್‌ಗಳ ಚೇತರಿಕೆ ಕಂಡಿದೆ. 
 
ಎನ್‌‍ಎಸ್‌ಇ ನಿಫ್ಟಿ ಕೂಡಾ 7 ಸಾವಿರ ಮಾನಸಿಕ ಗಡಿಯನ್ನು ದಾಟಿ ವಹಿವಾಟಿನಲ್ಲಿ ಏರಿಕೆ ಕಂಡಿದೆ.
 
ಐಟಿ, ತಂತ್ರಜ್ಞಾನ ಮತ್ತು ಎಫ್‌ಎಂಸಿಜಿ ಶೇರುಗಳ ವಹಿವಾಟು ಏರಿಕೆಯಾಗಿದ್ದರಿಂದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 164.44 ಪಾಯಿಂಟ್‌ಗಳ ಏರಿಕೆ ಕಂಡು 23,116.27 ಅಂಕಗಳಿಗೆ ತಲುಪಿದೆ. 
 
ಜಾಗತಿಕ ಆರ್ಥಿಕ ಕುಸಿತ ಮತ್ತು ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ನಿನ್ನೆ 807 ಪಾಯಿಂಟ್‌ಗಳಷ್ಟು ಕುಸಿತ ಕಂಡ ಶೇರುಪೇಟೆ ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 1665.14 ಅಂಶಗಳಷ್ಟು ಕುಸಿತ ಕಂಡಿತ್ತು.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 50.40 ಪಾಯಿಂಟ್‌ಗಳಷ್ಟು ಚೇತರಿಕೆ ಕಂಡು 7,026.75 ಅಂಕಗಳಿಗೆ ತಲುಪಿದೆ. 
 
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.44 ರಷ್ಟು ಕುಸಿತ ಕಂಡಿದ್ದರೆ, ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಕೂಡಾ ಶೇ.5.34 ರಷ್ಟು ಕುಸಿತ ಕಂಡಿದೆ.

ವೆಬ್ದುನಿಯಾವನ್ನು ಓದಿ