ಸೆನ್ಸೆಕ್ಸ್: 76 ಪಾಯಿಂಟ್‌ಗಳ ಕುಸಿತ ಕಂಡ ಸಂವೇದಿ ಸೂಚ್ಯಂಕ

ಬುಧವಾರ, 20 ಆಗಸ್ಟ್ 2014 (14:08 IST)
ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 76.49 ಪಾಯಿಂಟ್‌ಗಳ ಕುಸಿತ ಕಂಡಿದೆ.
 
ಎಫ್‌ಎಂಸಿಜಿ, ವಾಹನೋದ್ಯಮ, ರಿಯಲ್ಟಿ, ಬ್ಯಾಂಕ್‌, ಬಂಡವಾಳ ವಸ್ತುಗಳು ಮತ್ತು ಗೃಹೋಪಕರಣ ವಸ್ತುಗಳ ಕ್ಷೇತ್ರದ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
 
ಬಿಎಸ್ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 76.49 ಪಾಯಿಂಟ್‌ಗಳ ಕುಸಿತ ಕಂಡು 26,344.18 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 23.35 ಪಾಯಿಂಟ್‌ಗಳ ಏರಿಕೆ ಕಂಡು 7922.70 ಅಂಕಗಳಿಗೆ ತಲುಪಿದೆ. 
 
ಒಎನ್‌ಜಿಸಿ, ಹಿರೋ ಮೋಟಾರ್ ಕಾರ್ಪೋರೇಶನ್, ಎಸ್‌ಬಿಐ, ಐಟಿಸಿ, ಹಿಂದ್ ಯುನಿಲಿವರ್, ಎಕ್ಸಿಸ್ ಬ್ಯಾಂಕ್ ಮತ್ತು ಎಲ್‌ಆಂಡ್‌ಟಿ ಸೇರುಗಳು ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ.   
 

ವೆಬ್ದುನಿಯಾವನ್ನು ಓದಿ