ಸೆನ್ಸೆಕ್ಸ್: ವಹಿವಾಟಿನಲ್ಲಿ ಅಲ್ಪ ಚೇತರಿಕೆ ಕಂಡ ಸಂವೇದಿ ಸೂಚ್ಯಂಕ

ಮಂಗಳವಾರ, 6 ಅಕ್ಟೋಬರ್ 2015 (16:22 IST)
ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 86 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಗೃಹೋಪಕರಣ ವಸ್ತುಗಳು, ತೈಲ ಮತ್ತು ಅನಿಲ, ಹೆಲ್ತ್‌ಕೇರ್ ಮತ್ತು ರಿಯಲ್ಟಿ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ಬಿಎಸ್ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 86.36 ಪಾಯಿಂಟ್‌ಗಳ ಏರಿಕೆಯಾಗಿ 27,010.27 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 16.30 ಪಾಯಿಂಟ್‌ಗಳ ಏರಿಕೆಯಾಗಿ 8,135.60 ಅಂಕಗಳಿಗೆ ತಲುಪಿದೆ.
 
ಟಾಟಾ ಮೋಟಾರ್ಸ್, ಗೇಲ್, ಕೋಲ್ ಇಂಡಿಯಾ, ಸಿಪ್ಲಾ, ಡಾ.ರೆಡ್ಡಿ, ವೇದಾಂತಾ, ಒಎನ್‌ಜಿಸಿ ಮತ್ತು ಸನ್ ಫಾರ್ಮಾ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ. 
 
ಬಿಎಚ್‌ಇಎಲ್, ಇನ್ಫೋಸಿಸ್, ಮಾರುತಿ ಸುಜುಕಿ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. 
 
ಹಾಂಗ್‌ಸೆಂಗ್, ನಿಕೈ ಮತ್ತು ತೈವಾನ್ ಶೇರುಪೇಟೆಗಳು ಶೇ.0.01 ರಷ್ಟು ಏರಿಕೆಯಾಗಿವೆ. ಚೀನಾ ಮಾರುಕಟ್ಟೆಗೆ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ