ದೇಶದ್ರೋಹಿ ಮಸರತ್ ಆಲಂ ಬಂಧನ

ಶುಕ್ರವಾರ, 17 ಏಪ್ರಿಲ್ 2015 (09:10 IST)
ಕೇಂದ್ರ ಸರಕಾರ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ನ ಒತ್ತಡಕ್ಕೆ ಮಣಿದಿರುವ ಜಮ್ಮು ಮತ್ತು ಕಾಶ್ಮೀರ ಸರಕಾರ ಕೊನೆಗೂ ಪ್ರತ್ಯೇಕತಾವಾದಿ ಮಸ್ರತ್ ಆಲಂನನ್ನು ಬಂಧಿಸಿದೆ. ಶುಕ್ರವಾರ ಬೆಳಿಗ್ಗೆ ಆಲಂನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಇಂದು ಸಹ ಶ್ರೀನಗರದಲ್ಲಿ ಮೆರವಣಿಗೆಯನ್ನು ಮಾಡಲಿದ್ದ ಪ್ರತ್ಯೇಕತಾವಾದಿಗಳು ಪುನಃ ದೇಶದ್ರೋಹಿ ಚಟುವಟಿಕೆಗಳನ್ನು ಕೈಗೊಳ್ಳುವ ಸಾಧ್ಯತೆ ಇತ್ತು. 
 
ಇತ್ತೀಚಿಗಷ್ಟೇ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಆಲಂ ಶ್ರೀನಗರದಲ್ಲಿ ಪಾಕ್ ಧ್ವಜ ಹಾರಿಸಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದ. ಇದು ದೇಶಾದ್ಯಂತ ತೀವೃ ಖಂಡನೆಗೆ ಗುರಿಯಾಗಿತ್ತು.
 
ಪ್ರಕಾರ ಆಲಂ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರ ಸರಕಾರಕ್ಕೆ  ಕೇಂದ್ರ ತಾಕೀತು ಮಾಡಿತ್ತು
ಅಲ್ಲದೇ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಜತೆ ಮಾತನಾಡಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಿ ಸಾಧ್ಯವಿಲ್ಲ ಎಂದಿದ್ದರು. ಅಲ್ಲದೇ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ವರಿಷ್ಠರು ಹೇಳಿದ್ದರು. 
 
5 ವರ್ಷಗಳ ದೀರ್ಘಕಾಲದ ನಂತರ ಜಮ್ಮು ಮತ್ತು ಕಾಶ್ಮೀರ ಸರಕಾರ ಪ್ರತ್ಯೇಕತಾವಾದಿ ಗಿಲಾನಿಗೆ ಮೆರವಣಿಗೆ ನಡೆಸಲು ಅವಕಾಶ ಕೊಟ್ಟಿತ್ತು. ಅದರಲ್ಲಿ ಗಿಲಾನಿ ಬೆಂಬಲಿಗರಾದ ಮಸ್ರತ್ ಆಲಂ ಸೇರಿದಂತೆ ಹಲವರು ಪಾಕಿಸ್ತಾನ್ ಪರ ಘೋಷಣೆಗಳನ್ನು ಕೂಗಿ ಪಾಕ್ ಧ್ವಜವನ್ನು ಹಾರಿಸಿದ್ದರು. 

ವೆಬ್ದುನಿಯಾವನ್ನು ಓದಿ