ಟ್ವಿಟರ್ ಮೊಬೈಲ್ ವಿಡಿಯೋ ಕ್ಯಾಮರಾ ಬಳಸುತ್ತಿರುವ ಮೊದಲ ಭಾರತೀಯ ಶಾರುಖ್ ಖಾನ್

ಗುರುವಾರ, 29 ಜನವರಿ 2015 (15:37 IST)
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್  ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌‌ನಲ್ಲಿ ಮೊಬೈಲ್ ವಿಡಿಯೋ ಕ್ಯಾಮರಾ ವೈಶಿಷ್ಠ್ಯತೆಯನ್ನು ಬಳಸುತ್ತಿರುವ ಪ್ರಥಮ ಭಾರತೀಯ ಎನಿಸಿದ್ದಾರೆ. 
.
ತಮ್ಮ ಬಳಕೆದಾರರು ನೇರವಾಗಿ ಸೈಟ್‌ನಿಂದಲೇ ವೀಡಿಯೊಗಳನ್ನು ಸೆರೆ ಹಿಡಿಯಲು, ಎಡಿಟ್ ಮಾಡಲು ಮತ್ತು ಹಂಚಿಕೊಳ್ಳಲು ಅನುಮತಿಸುವ ಒಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಟ್ವಿಟರ್ ಇತ್ತೀಚೆಗೆ ಪ್ರಕಟಿಸಿತು.
 
 "ಟ್ವಿಟರ್ ಯಾವಾಗಲೂ ಕೆಲವು ಕುತೂಹಲಕಾರಿ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುತ್ತದೆ ಮತ್ತು ನೀಡಿದ ಸಲಹೆಗಳನ್ನು ಸಹ ಸದಾ ಸ್ವೀಕರಿಸುತ್ತದೆ. ಟ್ವಿಟರ್‌ನ ಈ ಮೊಬೈಲ್ ವಿಡಿಯೋ ಕ್ಯಾಮರಾವನ್ನು ಬಳಸುವುದರಲ್ಲಿ ನಾನು ಖಂಡಿತವಾಗಿಯೂ ಅನಂದಿಸುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ. 
 
ಶಾರುಖ್ ಖಾನ್ ಧ್ವನಿ ಸಂದೇಶಗಳನ್ನು ಕಳುಹಿಸಲು ಟ್ವಿಟರ್ ಆಡಿಯೋ ಕಾರ್ಡ್ ಬಳಸುತ್ತಿರುವ ಪ್ರಥಮ ಭಾರತೀಯ ಎನಿಸಿಕೊಂಡಿದ್ದರು. ಈಗ ಟ್ವಿಟರ್‌ನ ಮೊಬೈಲ್ ವಿಡಿಯೋ ಕ್ಯಾಮರಾ ಬಳಸಿದ ಭಾರತದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಇದು ಅವರಿಗೆ ಹೆಚ್ಚಿನ ಉಲ್ಲಾಸವನ್ನು ತರಲಿದೆ ", ಎಂದು ಟ್ವಿಟರ್‌ನ ಭಾರತ ಮತ್ತು ಆಗ್ನೇಯ ಏಷ್ಯಾದ ಮಾರುಕಟ್ಟೆ ನಿರ್ದೇಶಕ ರಿಷಿ ಜೇಟ್ಲಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ