ಶಾರುಖ್ ಪ್ರಥಮ ಸಂಬಳ ಕೇವಲ 50 ರೂಪಾಯಿ ಅಂದರೆ ನಂಬುತ್ತೀರಾ?

ಶನಿವಾರ, 28 ಮಾರ್ಚ್ 2015 (11:01 IST)
ಒಂದು ಸಿನಿಮಾಗೆ 100ಕೋಟಿ ಸಂಭಾವನೆ ಪಡೆದು ಜಗತ್ತಿನ ಎರಡನೇ ಶ್ರೀಮಂತ ನಟ ಎನ್ನಿಸಿರುವ ಬಾಲಿವುಡ್ ಬಾದಶಾ ಶಾರುಖ್ ಖಾನ್ ಪಡೆದ ಪ್ರಥಮ ಸಂಬಳ 5 ರೂಪಾಯಿ ಎಂದರೆ ನಂಬುತ್ತೀರಾ? ಆದರೆ ಇದು ಸತ್ಯ.
 
"ಇಂಡಿಯಾ ಫುಚೆಗಾ ಸಬ್ಸೇ ಶಾಣಾ ಕೌನ್", ಗ್ರೆಂಡ್ ಫಿನಾಲೆಯಲ್ಲಿ ತಮ್ಮ ಜೀವನದ ಹಳೆಯ ಘಟನೆಗಳನ್ನು ಮೆಲುಕು ಹಾಕಿದ ಖಾನ್, 'ಟಿಕೆಟ್ ಮಾರಾಟಗಾರನಾಗಿ ಥಿಯೇಟರ್‌ಗಳಲ್ಲಿ ಕೆಲಸ ಮಾಡಿದ್ದು ತಮ್ಮ ಪ್ರಥಮ ಉದ್ಯೋಗ. ಆ ಕೆಲಸದಲ್ಲಿ ತಮಗೆ ಬರುತ್ತಿದ್ದ ಸಂಬಳ 50', ಎಂದು ಹೇಳಿದ್ದಾರೆ. 
 
1980ರ ದಶಕದ ಕೊನೆಯಲ್ಲಿ ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ವೃತ್ತಿಜೀವನವನ್ನು ಆರಂಭಿಸಿದ 'ಖಾನ್‌' 'ದಿವಾನಾ'(1992) ಚಲನಚಿತ್ರದ ಮೂಲಕ ಚಿತ್ರಜಗತ್ತಿಗೆ ಪರಿಚಿತರಾದರು. ಅಲ್ಲಿಂದ ಹಿಂದಿರುಗಿ ನೋಡದ ಅವರು ಯಶಸ್ಸಿನ ಉತ್ತುಂಗ ಶಿಖರಕ್ಕೆ ಏರಿದ ರೀತಿ ಯಾರು ಕೂಡ ಊಹಿಸದಂತದ್ದು. 

ವೆಬ್ದುನಿಯಾವನ್ನು ಓದಿ