ಸಿಎಂ ಆನಂದಿ ಬೆನ್ ಬದಲಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಮಿತ್ ಶಾ?

ಮಂಗಳವಾರ, 31 ಮೇ 2016 (15:02 IST)
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ತಾವು ಮರಳಬಹುದು ಎನ್ನುವ ವರದಿಗಳನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಳ್ಳಿಹಾಕಿದ್ದು, 2019 ರವರೆಗೆ ತಮ್ಮ ಆಕಾಂಕ್ಷೆಗಳಿಗೆ ವಿರಾಮ ನೀಡುತ್ತಿರುವುದಾಗಿ ಹೇಳಿದ್ದಾರೆ.
 
ಅಮಿತ್ ಶಾ ಅವರಿಗೆ ಆಪ್ತವಾಗಿರುವ ಮೂಲಗಳ ಪ್ರಕಾರ, ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಗೆಲುವು ಮತ್ತು 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರವಹಿಸುವುದು. ಅಲ್ಲಿಯವರೆಗೆ ರಾಷ್ಟ್ರಾಧ್ಯಕ್ಷ ಅವಧಿ ಕೂಡಾ ಮುಕ್ತಾಯಗೊಳ್ಳಲಿರುವುದರಿಂದ, ತದ ನಂತರ ಗುಜರಾತ್‌ಗೆ ಮರಳಲು ಶಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. 
 
ಪ್ರಧಾನಿ ಮೋದಿಯವರ ಕಟ್ಟಾ ಬೆಂಬಲಿಗರಾದ ಅಮಿತ್ ಶಾ ಮಾತನಾಡಿ, ಗುಜರಾತ್ ರಾಜ್ಯದತ್ತ ಗಮನಹರಿಸುವುದಕ್ಕಿಂತ ಮುಂಚೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ರಾಜಕೀಯ ಭವಿಷ್ಯ ಗುರುತಿಸಿಕೊಳ್ಳುವುದು ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.
 
ಕಳೆದ ಲೋಕಸಬೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿ ಆನಂದಿ ಬೆನ್ ಪಟೇಲ್‌ರನ್ನು ಆಯ್ಕೆ ಮಾಡಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ