ಚಿಲ್ಲರೆ ಸಿಗರೇಟು ಮಾರಾಟ ನಿಷೇಧಕ್ಕೆ ಸರ್ಕಾರ ಅಸ್ತು: ಐಟಿಸಿ ಷೇರು ಮೌಲ್ಯ ಕುಸಿತ

ಮಂಗಳವಾರ, 25 ನವೆಂಬರ್ 2014 (18:33 IST)
ಚಿಲ್ಲರೆ ಸಿಗರೇಟು ಮಾರಾಟ ನಿಷೇಧಕ್ಕೆ ಪ್ರಸ್ತಾಪ ಮಾಡಿದ ತಜ್ಞರ ಸಮಿತಿ ಶಿಫಾರಸುಗಳನ್ನು ಒಪ್ಪಿರುವುದಾಗಿ ಸರ್ಕಾರ ಮಂಗಳವಾರ ತಿಳಿಸಿದ್ದು, ತಂಬಾಕು ಕಂಪೆನಿಗಳ ಷೇರು ಮೌಲ್ಯಗಳಲ್ಲಿ ತೀವ್ರ ಕುಸಿತ ಉಂಟಾಗಿದೆ.

 ತಂಬಾಕು ಉತ್ಪನ್ನಗಳ ಖರೀದಿದಾರರ ಕನಿಷ್ಠ ವಯೋಮಿತಿಯನ್ನು ಕೂಡ ಹೆಚ್ಚಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದ್ದು, 2003ರ ತಂಬಾಕು ಉತ್ಪನ್ನ ಕಾಯ್ದೆಯ 
ನಿಯಮ ಉಲ್ಲಂಘಿಸಿದರೆ ಅಧಿಕ ದಂಡವನ್ನು ವಿಧಿಸುವಂತೆ ಕೂಡ ಸಲಹೆ ಮಾಡಿದೆ.

ಸಚಿವಾಲಯವು ಶಿಫಾರಸುಗಳನ್ನು ಒಪ್ಪಿದ್ದು, ಕ್ಯಾಬಿನೆಟ್ ಕರಡು ಟಿಪ್ಪಣಿಯನ್ನು ವಿತರಿಸಲಾಗಿದೆ. ಈ ಶಿಫಾರಸುಗಳನ್ನು ಕ್ಯಾಬಿನೆಟ್ ಎದುರು ಇಡಲಾಗಿದ್ದು, ಅವುಗಳನ್ನು ಅನುಷ್ಠಾನಕ್ಕೆ ತರುವ ಮುಂಚೆ ಸಂಸತ್ತಿನ ಅನುಮತಿ ಅಗತ್ಯವಾಗುತ್ತದೆ.

ಶೇ. 70ರಷ್ಟು ಮಾರಾಟ ಬಿಡಿ ಸಿಗರೇಟುಗಳಿಂದ ಆಗುತ್ತಿದ್ದು, ಅನೇಕ ಮಂದಿ ಸರಾಸರಿ 190 ರೂ.ಗೆ ಪ್ಯಾಕೆಟ್ ಖರೀದಿಸುವ ಸಾಮರ್ಥ್ಯ ಹೊಂದದಿರುವುದರಿಂದ ಮಾರಾಟ ಶೇ.  ಶೇ.10ರಿಂದ 20ರಷ್ಟು ಕುಸಿಯಲಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಎಲ್ಲ ತಂಬಾಕು ಕಂಪನಿಗಳ ಷೇರು ಮೌಲ್ಯ ಕುಸಿದಿದ್ದು, ಐಟಿಸಿ ಕಂಪನಿಯ ಷೇರು ಶೇ. 7ರಷ್ಟು ಕುಸಿದು 348.60ಕ್ಕೆ ಇಳಿದಿದೆ.

ವೆಬ್ದುನಿಯಾವನ್ನು ಓದಿ