ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆ: ಪಕ್ಷದ ವಿರುದ್ಧ ಮತ್ತೆ ಕಿಡಿಕಾರಿದ ಶತ್ರುಘ್ನ ಸಿನ್ಹಾ

ಶನಿವಾರ, 30 ಜನವರಿ 2016 (14:47 IST)
ಬಾಲಿವುಡ್ ನಟ ಪರಿವರ್ತಿತ ರಾಜಕಾರಣಿ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಮತ್ತೆ ಪಕ್ಷದ ವಿರುದ್ಧ ಗುಡುಗಿದ್ದಾರೆ. ಅರುಣಾಚಲಪ್ರದೇಶದಲ್ಲಿ ರಾಷ್ಟಪತಿ ಆಳ್ವಿಕೆ ಹೇರಲು ಪ್ರಧಾನಿ ಮೋದಿಯವರಿಗೆ ಸಲಹೆ ನೀಡಿದ ಮಹಾನ್ ಸಲಹೆಗಾರರು ಯಾರು ಎಂದು ಅವರು ಗುಡುಗಿದ್ದಾರೆ.
 
ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಸಂಬಂಧಿಸಿದಂತೆ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ತೋರ್ಪಡಿಸಿರುವ ಪಾಟ್ಣಾ ಸಾಹೀಬ್ ಸಂಸದ ಸಿನ್ಹಾ, ಡೈನಮಿಕ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸಲಹೆ ನೀಡಿದ ಗ್ರೇಟ್ ಸಲಹೆಗಾರರು ಯಾರು ಎಂದು ವ್ಯಂಗ್ಯವಾಡಿದ್ದಾರೆ.
 
ಈ ವಿಷಯ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವಾಗ ಕೇಂದ್ರ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿರುವುದು ನನಗೆ ಆಶ್ಚರ್ಯವನ್ನು ಮಾಡಿದೆ ಎಂದು ಇತ್ತೀಚಿಗೆ ಅವರು ಹೇಳಿದ್ದರು. 
 
ಒಂದು ವೇಳೆ ಸುಪ್ರೀಂಕೋರ್ಟ್ ತೀರ್ಪು ಕಾಂಗ್ರೆಸ್ ಪರವಾಗಿ ಬಂದರೆ ನಮ್ಮ ಗೌರವಾನ್ವಿತ ಪ್ರಧಾನಿ ನಿರ್ಧಾರಕ್ಕೆ ನಾವು ಏನು ಉತ್ತರ ಮತ್ತು ಸ್ಪಷ್ಟನೆ ಕೊಡಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. 
 
ಅರುಣಾಚಲಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವುದಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ ಉತ್ತರವನ್ನು ನೀಡಿದೆ.
 
ಗಡಿನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರ ಮಾಡಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಗುರುವಾರ ಒಪ್ಪಿಗೆ ನೀಡಿದ್ದರು.
 

ವೆಬ್ದುನಿಯಾವನ್ನು ಓದಿ