ಅತ್ಯಾಚಾರಕ್ಕೊಳಗಾಗಿದ್ದು ನನ್ನ ತಪ್ಪೇ: ರೇಪ್ ಸಂತ್ರಸ್ತೆಯ ಪ್ರಶ್ನೆ

ಸೋಮವಾರ, 15 ಸೆಪ್ಟಂಬರ್ 2014 (12:30 IST)
ದಕ್ಷಿಣ ಕೊಲ್ಕತ್ತಾದ ಕಾಲಿಗಟ್ ಪ್ರದೇಶದಲ್ಲಿರುವ ರೆಸ್ಟೊರೆಂಟ್ ಕಮ್ ಬಾರ್  ಜಿಂಜರ್  ವ್ಯವಸ್ಥಾಪಕ ಮಂಡಳಿ ತನ್ನನ್ನು ಬಾರ್‌ನೊಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು 40 ವರ್ಷ ವಯಸ್ಸಿನ ಮಹಿಳೆ ದೂರಿದ್ದಾರೆ. 
 
 ತಾನು ಪಾರ್ಕ್ ಸ್ಟ್ರೀಟ್  ರೇಪ್  ಸಂತ್ರಸ್ತೆಯಾಗಿರುವುದರಿಂದ ಮ್ಯಾನೇಜ್‌ಮೆಂಟ್  ತನಗೆ ಒಳಕ್ಕೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ  ಎಂದು  ದೂರಿದ್ದಾರೆ.  ನನ್ನನ್ನು ಒಳಗೆ ಪ್ರವೇಶಿಸಲು ಬಿಡದಂತೆ ಆದೇಶವಿರುವುದಾಗಿ ತಿಳಿಸಿದರು. ನಾನು ಅತ್ಯಾಚಾರಕ್ಕೊಳಗಾಗಿರುವುದು  ನನ್ನ ತಪ್ಪೇ, ನಾನು ಸಹಜ ಜೀವನ ನಡೆಸಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಮಹಿಳೆ ಪ್ರಶ್ನಿಸಿದರು. 
 
ಆದರೆ ರೆಸ್ಟೋರೆಂಟ್ ವ್ಯವಸ್ಥಾಪಕ ಮಂಡಳಿ ಈ ಆರೋಪ ನಿರಾಕರಿಸಿದ್ದು, ಮಹಿಳೆ ತೊಂದರೆ ಉಂಟುಮಾಡಿದ್ದರಿಂದ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಹೇಳಿದೆ.
ಅವರು ರೇಪ್ ಸಂತ್ರಸ್ತೆ ಎಂಬ ಕಾರಣಕ್ಕಾಗಿ ಪ್ರವೇಶ ನಿಷೇಧಿಸಿಲ್ಲ. ಇದಕ್ಕೆ ಮುಂಚೆ ಅವರು ತೊಂದರೆ ಉಂಟುಮಾಡಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ಅವರು ಹೇಗೆ ಗಲಾಟೆ ಮಾಡಿದರು ಎನ್ನುವ ವಿಡಿಯೋ ನಮ್ಮ ಬಳಿಯಿದೆ. ಆದ್ದರಿಂದ ಅವರಿಗೆ ಪ್ರವೇಶ  ನಿಷೇಧಿಸಿರುವುದಾಗಿ ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಮಹಿಳೆಗೆ ಗನ್ ತೋರಿಸಿ ಚಲಿಸುವ ಕಾರಿನಲ್ಲಿ ರೇಪ್ ಮಾಡಲಾಗಿತ್ತು. ನಂತರ ಕಾರಿನಿಂದ ಹೊರಕ್ಕೆ ಬಿಸಾಕಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಐವರಿಗೆ ಕೋರ್ಟ್ ಆರೋಪ ಹೊರಿಸಿದ್ದು, ಮೂವರು ಮಾತ್ರ ಜೈಲಿನಲ್ಲಿದ್ದಾರೆ. ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ನಾಪತ್ತೆಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ