ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ, ಪೀಟರ್ ವಿರುದ್ಧ ಕೊಲೆ ಪ್ರಕರಣ ದಾಖಲು

ಬುಧವಾರ, 18 ಜನವರಿ 2017 (08:25 IST)
ದೇಶದಾದ್ಯಂತ ಭಾರಿ ಸದ್ದು ಮಾಡಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಮತ್ತು ಆಕೆಯ ಹಾಲಿ ಪತಿ ಪೀಟರ್ ಮುಖರ್ಜಿ, ಎರಡನೆಯ ಪತಿ ಸಂಜೀವ್ ಖನ್ನಾ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ದೋಷಾರೋಪವನ್ನು ಹೊರಿಸಿದೆ. ಫೆಬ್ರವರಿ 1ರಿಂದ ಸಿಬಿಐ ವಿಶೇಷ ಕೋರ್ಟ್​ನಲ್ಲಿ ವಿಚಾರಣೆ ಆರಂಭಗೊಳ್ಳಲಿದೆ.

ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120(ಬಿ) (ಅಪರಾಧ ಸಂಚು), 365(ಅಪಹರಣ) 302(ಕೊಲೆ), 34(ಉದ್ದೇಶಪೂರ್ವ ಕೃತ್ಯ), 2013 (ತಪ್ಪು ಮಾಹಿತಿ ನೀಡುವಿಕೆ) 201(ಸಾಕ್ಷ್ಯಾಧಾರ ನಾಶ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
 
ಜತೆಗೆ ಇಂದ್ರಾಣಿ ಮತ್ತು ಸಂಜೀವ್‌ ವಿರುದ್ಧ ಐಪಿಸಿ ವಿಭಾಗ 307 (ಕೊಲೆ ಯತ್ನ), 120 ಬಿ (ಕ್ರಿಮಿನಲ್‌ ಸಂಚು - ಶೀನಾ ಬೋರಾ  ಸಹೋದರ ಮಿಖಾಯಲ್‌ ಬೋರಾ ಕೊಲೆ ಸಂಚು) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ. 
 
ಆರೋಪಿಗಳು ತಾವು ತಪ್ಪು ಮಾಡಿಲ್ಲ ಎಂದು ವಾದಿಸುತ್ತಿರುವುದರಿಂದ  ಮುಂದಿನ ವಿಚಾರಣೆಯನ್ನು ಫೆ.1ಕ್ಕೆ ನಿಗದಿಸಲಾಗಿದೆ.
 
2012ರ ಏಪ್ರಿಲ್‌ 24ರಂದು ಇಂದ್ರಾಣಿ ಪುತ್ರಿ ಶೀನಾ ಹತ್ಯೆಗೈದಿದ್ದರು.  ರಾಯಗಡ ಅರಣ್ಯದಲ್ಲಿ ದೇಹವನ್ನು ಸುಟ್ಟುಹಾಕಲಾಗಿದೆ ಎಂಬುದು ಪೊಲೀಸರ ಆರೋಪ. ಸಹೋದರಿ ಬಗ್ಗೆ ಪ್ರಶ್ನಿಸುತ್ತಿದ್ದ ಶೀನಾ ಸಹೋದರ ಮಿಖಾಯಿಲ್ ಬೋರಾ ಅವರ ಹತ್ಯೆಗೆ ಮಾಡಲು ಯತ್ನಿಸಿದ ಆರೋಪ ಇಂದ್ರಾಣಿ ಮತ್ತು ಸಂಜೀವ್‌ ವಿರುದ್ಧ ಹೊರಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ