ಶೀನಾ ಬೋರಾ ಹತ್ಯೆ ಪ್ರಕರಣ: ಪೀಟರ್ ಮುಖರ್ಜಿ ಸಿಬಿಐ ವಶಕ್ಕೆ

ಶುಕ್ರವಾರ, 20 ನವೆಂಬರ್ 2015 (16:43 IST)
ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ದೊರೆ ಪೀಟರ್ ಮುಖರ್ಜಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಅವರ ವಿರುದ್ಧ ಹತ್ಯೆ ಮತ್ತು ಅಪರಾಧಿಕ ಸಂಚಿನ ಆರೋಪ ಹೊರಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
 
ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಪತ್ನಿ ಇಂದ್ರಾಣಿ ಮುಖರ್ಜಿ ಪರವಾಗಿ ಸಾಕ್ಷ್ಯ ನಾಶ ಮಾಡಿದ ಆರೋಪ ಎದುರಿಸುತ್ತಿರುವ ಮುಖರ್ಜಿಯನ್ನು ನವೆಂಬರ್ 23 ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ.
 
ಶೀನಾ ಪ್ರಕರಣದ ಬಗ್ಗೆ ಸಮರೋಪಾದಿಯಲ್ಲಿ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು, ಪೀಟರ್ ಮುಖರ್ಜಿ ಸೇರಿದಂತೆ ಇತರ ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
 
ತನಿಖಾ ಸಂಸ್ಥೆಗಳ ಪ್ರಕಾರ, ಪೀಟರ್ ಆರೋಪಿ ಪತ್ನಿ ರಕ್ಷಿಸುವುದಕ್ಕಾಗಿ ಪ್ರಯತ್ನಿಸಿರುವುದು, ಹೇಳಿಕೆಗಳನ್ನು ಬದಲಿಸುತ್ತಿರುವುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಮುಂಬೈ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಶೀನಾ ಬೋರಾಳ ಮೃತ ದೇಹ ಪತ್ತೆಯಾದ ಮೂರು ತಿಂಗಳ ನಂತರ ಸಿಬಿಐ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ