ಶೀನಾ ಬೋರಾ ಕೊಲೆ ಪ್ರಕರಣ: ಜೈಲಿನಲ್ಲಿ ಪ್ರಶ್ನಿಸಲು ಸಿಬಿಐಗೆ ಅನುಮತಿ

ಬುಧವಾರ, 7 ಅಕ್ಟೋಬರ್ 2015 (18:25 IST)
ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಾಯಿ, ಮುಖ್ಯ ಆರೋಪಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಮೂವರು ಆರೋಪಿಗಳನ್ನು ಜೈಲಿನಲ್ಲೇ ವಿಚಾರಣೆಗೆ ಒಳಪಡಿಸಲು ಕೆಲವು ನಿರ್ಬಂಧಗಳ ಮೇರೆಗೆ ಸಿಬಿಐಗೆ ಮುಂಬೈ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.  

ಇಂದ್ರಾಣಿ ಮುಖರ್ಜಿ, ಅವರ ಮಾಜಿ ಪತಿ ಸಂಜೀವಾ ಖನ್ನಾ, ಕಾರು ಚಾಲಕ ಶ್ಯಾಮ್ ರಾಯ್‌ ಅವರನ್ನು ಜೈಲಿನೊಳಗೆ ವಿಚಾರಣೆಗೊಳಪಡಿಸಲು ಅನುಮತಿ ಕೋರಿ  ಸಿಬಿಐ ಸೋಮವಾರ ಕೋರ್ಟ್‌ಗೆ ಮನವಿ ಮಾಡಿತ್ತು. 
 
ಈ ಹಿಂದೆ ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರ್ಕಾರ 1 ತಿಂಗಳ ಹಿಂದೆ ಸಿಬಿಐ ವಶಕ್ಕೆ ಒಪ್ಪಿಸಿತ್ತು.  
 
ಜೈಲಿನಲ್ಲಿಯೇ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬೇಕು. ಇಲ್ಲದಿದ್ದರೆ  ತನಿಖೆ ಕೈಗೊಳ್ಳಲು ನಾವು ಮುಂಬೈ ಪೊಲೀಸರು ಸಿದ್ಧಪಡಿಸಿರುವ ವರದಿಯನ್ನೇ ಪರಿಗಣಿಸಬೇಕಾಗುತ್ತದೆ ಎಂದು ಸಿಬಿಐ ಕೋರ್ಟ್‌ಗೆ  ಮನವಿ ಮಾಡಿತ್ತು.

ವೆಬ್ದುನಿಯಾವನ್ನು ಓದಿ