ಪ್ರಧಾನಿ ಮೋದಿ ಘೋಷಣೆಗಳು ಹಳಸಿದ ಪಕೋಡಾ ಹೊಸ ಪ್ಯಾಕ್‌ನಲ್ಲಿ ಮಾರಿದಂತೆ: ಶಿವಸೇನೆ

ಸೋಮವಾರ, 2 ಜನವರಿ 2017 (15:22 IST)
ಹೊಸ ವರ್ಷಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ ಹಿಯಾಯಿತಿಗಳು ಹೊಸ ಪಾಕೇಟ್‌ನಲ್ಲಿ ಹಳಸಿದ ಪಕೋಡಾಗಳಿದ್ದಂತೆ ಎಂದು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ವಾಗ್ದಾಳಿ ನಡೆಸಿದೆ.
 
ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾ ಮತ್ತು ದೋಪಹರ್‌ ಕಾ ಸಾಮ್ನಾ ಪತ್ರಿಕೆಗಳ ಸಂಪಾದಕೀಯದಲ್ಲಿ ಪ್ರಧಾನಿ ಮೋದಿ ರಿಯಾಯಿತಿ ಘೋಷಣೆಗಳನ್ನು ಟೀಕಿಸಿದೆ.
 
ಪ್ರಧಾನಿ ಮೋದಿ ಘೋಷಿಸಿದ ಹಲವಾರು ರಿಯಾಯಿತಿಗಳು ಯುಪಿಎ ಸರಕಾರ ಈ ಹಿಂದೆಯೇ ಘೋಷಿಸಿದೆ. ಉದಾಹರಣೆಗೆ ಗರ್ಭಿಣಿ ಮಹಿಳೆಗೆ 6 ಸಾವಿರ ಆರ್ಥಿಕ ನೆರವು ಕಾರ್ಯಕ್ರಮವನ್ನು ಯುಪಿಎ ಸರಕಾರ, ಇಂದಿರಾ ಗಾಂಧಿ ಮಾತೃತ್ವ ಯೋಜನೆಯ ಹೆಸರಲ್ಲಿ ಘೋಷಿಸಿತ್ತು . ಇದರಲ್ಲಿ ಹೊಸತೇನಿದೆ ಎಂದು ಸೇನೆ ಪ್ರಶ್ನಿಸಿದೆ. 
 
ಹಳಸಿದ ಪಕೋಡಾಗಳನ್ನು ಮತ್ತೆ ಬಿಸಿ ಮಾಡಿ ತಾಜಾ ಚಟ್ನಿಯೊಂದಿಗೆ ಕೊಟ್ಟಂತಾಗಿದೆ. ಇಂತಹ ಪಕೋಡಾಗಳನ್ನು ತಿಂದಲ್ಲಿ ಭಾರಿ ಆರೋಗ್ಯ ಸಮಸ್ಯೆಗಳು ಕಾಡುವುದಲ್ಲದೇ ಸಾವಿಗು ಕಾರಣವಾಗಬಹುದು ಎಂದು ಎಚ್ಚರಿಸಿದೆ.
 
ಏತನ್ಮಧ್ಯೆ, ಪ್ರಧಾನಮಂತ್ರಿ ಮೋದಿ ಮೂಲ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದಾರೆ. ನೋಟು ನಿಷೇಧದಿಂದಾಗಿ ಜನರ ಆರ್ಥಿಕ ಸಂಕಷ್ಟ ಮಿತಿ ಮೀರಿದ್ದು, ಅದಕ್ಕೆ ಪರಿಹಾರ ಪ್ರಕಟಿಸುವಲ್ಲಿ ವಿಫಲವಾಗಿದ್ದಾರೆ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ