ಮಹಾರಾಷ್ಟ್ರ ಸೇರಿದಂತೆ ದೇಶದೆಲ್ಲೆಡೆ ಮೋದಿ ಅಲೆ ವ್ಯಾಪಕವಾಗಿದೆ: ಘೋಷಿಸಿದ ಶಿವಸೇನಾ

ಶನಿವಾರ, 27 ಡಿಸೆಂಬರ್ 2014 (18:09 IST)
ದೇಶದೆಲ್ಲೆಡೆ ಮೋದಿ ಅಲೆ ಪ್ರಖರವಾಗಿದೆ ಎಂಬುದನ್ನು ಶಿವಸೇನೆ ಕೊನೆಗೂ ಒಪ್ಪಿಕೊಂಡಿದೆ. ವಿಶೇಷವಾಗಿ ಸೇನೆಯ ವರಿಷ್ಠ ಉದ್ಧವ್ ಠಾಕ್ರೆ ದೇಶದೆಲ್ಲೆದೆ ಮೋದಿ ಅಲೆ ವ್ಯಾಪಕವಾಗಿ ಹರಿದಾಡುತ್ತಿದೆ ಎಂಬುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
ಮೋದಿ ಅಲೆ 2014ರ  ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ  ದೊಡ್ಡ ಮಟ್ಟದ ಗೆಲುವನ್ನು ತಂದುಕೊಟ್ಟಿತು ಎಂಬುದನ್ನು ಠಾಕ್ರೆ ಒಪ್ಪಿಕೊಂಡಿದ್ದಾರೆ. 
 
ಜಮ್ಮು ಮತ್ತು ಕಾಶ್ಮೀರ, ಹಾಗೂ ಜಾರ್ಖಂಡ್‌ನಲ್ಲಿ ಬಿಜೆಪಿಗೆ ದೊರಕಿರುವ ದೊಡ್ಡ ಯಶಸ್ಸು ಮೋದಿ ಅಲೆಗೆ ಸಾಕ್ಷಿಯಾಗಿವೆ ಎಂದು ಪಕ್ಷದ ಮುಖವಾಣಿ "ಸಾಮ್ನಾ"ದಲ್ಲಿ ಸೇನೆ ಬರೆದಿದೆ.
 
“ಕೇವಲ ಮೋದಿ ಅಲೆ" ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ, ಜಾರ್ಖಂಡ್‌ನಲ್ಲಿ, 15 ವರ್ಷಗಳ ನಂತರ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಶ್ರೇಯಸ್ಸು ನರೇಂದ್ರ ಮೋದಿ ಮತ್ತು ಅಮಿತ್ ಶಾ  ಅವರಿಗೆ ಸಲ್ಲಬೇಕು  ಎಂದು ಠಾಕ್ರೆ  ಹೊಗಳಿದ್ದಾರೆ. 
 
ದೆಹಲಿಯಲ್ಲಿ ವಿರೋಧ ಪಕ್ಷಗಳು ಧರ್ಮಪರಿವರ್ತನೆ ವಿಷಯವನ್ನಿಟ್ಟುಕೊಂಡು ಕರ್ಕಶವಾಗಿ ಕೂಗಿಕೊಳ್ಳುತ್ತಿದ್ದರೆ,  ", ಮೋದಿ  ಜಾರ್ಖಂಡ್ ಮತ್ತು ಕಾಶ್ಮೀರದಲ್ಲಿ ಜನಸಾಮಾನ್ಯರಿಗೆ ನಡುವೆ ಸಾಗಿ ಅಭಿವೃದ್ಧಿ ಕಾರ್ಯಸೂಚಿಯನ್ನು ಪ್ರಚುರ ಪಡಿಸುತ್ತಿದ್ದರು. ಎರಡು ರಾಜ್ಯಗಳಲ್ಲಿ ಮೋದಿ ಅಲೆ ಮ್ಯಾಜಿಕ್ ಮಾಡಿತು. ವಿರೋಧಿಗಳು ಕುಸಿದು ನೆಲಕ್ಕೆ ಬಿದ್ದರು ಎಂದು ಉದ್ಧವ್ ಠಾಕ್ರೆಯವರ ಲೇಖನಿ ಹೇಳುತ್ತದೆ. 
 
ಸಾಮ್ನಾ ಸಂಪಾದಕೀಯ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್ ನೇತೃತ್ವದ ತಂಡದಿಂದ ಬರೆಯಲ್ಪಡುತ್ತದೆ. ಆದರೆ "ಸಂಪಾದಕ" ಉದ್ಧವ್ ಠಾಕ್ರೆ ಅನುಮೋದನೆ ನೀಡಿದ ಮೇಲೆಯಷ್ಟೇ ಸಂಪಾದಕೀಯ ಮುದ್ರಣ ಹೋಗುತ್ತದೆ ಎಂದು ಸೇನಾದ ನಾಯಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ