ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಿವಸೇನೆ ಕೆಂಗೆಣ್ಣು

ಮಂಗಳವಾರ, 19 ಆಗಸ್ಟ್ 2014 (14:59 IST)
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಅಸಂಬಂದ್ಧವಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾನ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ವರದಿ ಮಾಡಿದೆ. 
 
ಮಹಾಜನ ಆಯೋಗದ ಶಿಫಾರಸ್ಸಿನಂತೆ ಬೆಳಗಾವಿ ಗಡಿ ವಿವಾದ ಹಲವು ದಶಕಗಳ ಹಿಂದೆಯೇ ಅಂತ್ಯಗೊಂಡಿದೆ. ಮಹಾಜನ ವರದಿಯನ್ನು ಎರಡು ರಾಜ್ಯಗಳು ಅನುಷ್ಠಾನಕ್ಕೆ ತರುವುದೇ ಸಮಸ್ಯೆಗೆ ಪರಿಹಾರವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. 
 
ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾನ್ ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿ ಪ್ರತಿಕ್ರಿಯೆ ನೀಡಬೇಕು. ಉಪಮುಖ್ಯಮಂತ್ರಿ ಅಜಿತ್ ಪವಾರ್‌ ತಮ್ಮ ಹೇಳಿಕೆಯನ್ನು ನೀಡಲೇಬೇಕು ಎಂದು ಶಿವಸೇನೆ ಸಾಮ್ನಾ ಪತ್ರಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.   
 
ಬೆಳಗಾವಿ ವಿಷಯಕ್ಕೆ ಸಂಬಂದಿಸಿದಂತೆ ಮಹಾಜನ ವರದಿಯೇ ಅಂತಿಮವಲ್ಲ ಎಂದು ಸಾಮ್ನಾ ಪತ್ರಿಕೆಯಲ್ಲಿ ಶಿವಸೇನೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
 
ರಾಜ್ಯದ ಗಡಿಭಾಗಗಳಲ್ಲಿರುವ ಸುಮಾರು 20 ಲಕ್ಷ ಮರಾಠಿಗರಿಗಾದ ಅನ್ಯಾಯವಾಗಿದೆ ಎಂದು ತೋರಿಸುವ ಬಗ್ಗೆ ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ಸ್ವ-ಹಿತಾಸಕ್ತಿಗಾಗಿ ಬೆಳಗಾವಿ ವಿವಾದವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ. 
 
ಕರ್ನಾಟಕ ಸರಕಾರ ಗಡಿಭಾಗಗಳಲ್ಲಿರುವ ಮರಾಠಿಗಳ ಮೇಲೆ ತೋರಿಸುತ್ತಿರುವ ದೌರ್ಜನ್ಯದಿಂದಾಗಿ ಉಬ ರಾಜ್ಯಗಳ ಗಡಿ ವಿವಾದ ಜೀವಂತವಾಗಿ ಉಳಿದಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯ ಲೇಖನದಲ್ಲಿ ಶಿವಸೇನೆ ಕಿಡಿಕಾರಿದೆ.  
 

ವೆಬ್ದುನಿಯಾವನ್ನು ಓದಿ