ಅಮಿತ್ ಶಾ ಅಣಕಿಸಿ ಪೋಸ್ಟರ್ ಹಾಕಿದ ಸೇನೆ; ಬಿಜೆಪಿಯಿಂದ ತಕ್ಕ ಉತ್ತರದ ಎಚ್ಚರಿಕೆ

ಗುರುವಾರ, 30 ಜೂನ್ 2016 (18:19 IST)
ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿವಸೇನಾ ಸಂಬಂಧ ಸಂಪೂರ್ಣ ಹದಗೆಟ್ಟಿದೆ ಎನ್ನಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಠಾಕ್ರೆ ಪಾರ್ಟಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಅಣಕಿಸಿ ಪೋಸ್ಟರ್ ಹಾಕಿತ್ತು. ಇದು ಬಿಜೆಪಿಯನ್ನು ಕೆರಳಿಸಿದೆ. 
ಸೇನೆಯ ಈ ಅಪಹಾಸ್ಯಕ್ಕೆ ಗರಂ ಆಗಿರುವ ಬಿಜೆಪಿ ತಮ್ಮ ಕಾರ್ಯಕರ್ತರಿಗೆ ಲಗಾಮು ಹಾಕದಿದ್ದರೆ ತಕ್ಕ ಉತ್ತರ ನೀಡುವುದಾಗಿ ಶಿವಸೇನೆ ನಾಯಕರಿಗೆ ಎಚ್ಚರಿಕೆ ನೀಡಿದೆ. ಶಾ ಮತ್ತು ಬಿಜೆಪಿ ಮುಖ್ಯ ವಕ್ತಾರ ಮಾಧವ್ ಭಂಡಾರಿ ಅವರನ್ನು ಶೋಲೆ ಸಿನಿಮಾದ ಪಾತ್ರಧಾರಿಗಳಂತೆ ಚಿತ್ರಿಸಲಾಗಿತ್ತು. ಜತೆಗೆ ಪಕ್ಷದ ನಗರ ಘಟಕದ ಮುಖ್ಯಸ್ಥ ಆಶೀಶ್ ಸೆಲಾರ್ ಅವರ ಪ್ರತಿಕೃತಿಯನ್ನು ಸುಟ್ಟು ಹಾಕಲಾಗಿತ್ತು.
 
ಸದಾ ಕಾಲೆಳೆಯುವ ಮಿತ್ರ ಪಕ್ಷದ ವರ್ತನೆಗೆ ಕಿಡಿಕಾರಿರುವ ಬಿಜೆಪಿ ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದೆ. 
 
ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಇತ್ತೀಚಿಗೆ ಠಾಕ್ರೆ ಅವರನ್ನು ಶೋಲೆ ಚಿತ್ರದ ಜೈಲರ್ ಪಾತ್ರಕ್ಕೆಹೋಲಿಸಿದ್ದರು. ಇದಕ್ಕೆ ಕೆರಳಿರುವ ಸೇನೆ ಕಾರ್ಯಕರ್ತರು ಈ ಪರಿಯಲ್ಲಿ ಪ್ರತ್ಯುತ್ತರ ನೀಡಿದ್ದರು. 

ವೆಬ್ದುನಿಯಾವನ್ನು ಓದಿ