ಎನ್‌ಸಿಪಿ ಜತೆ ಮೈತ್ರಿ ಮಾಡಿಕೊಳ್ಳದಂತೆ ಬಿಜೆಪಿಗೆ ಶಿವಸೇನೆ ಎಚ್ಚರಿಕೆ

ಗುರುವಾರ, 30 ಅಕ್ಟೋಬರ್ 2014 (15:24 IST)
ಭಾರತೀಯ ಜನತಾ ಪಕ್ಷ ಶುಕ್ರವಾರ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಪ್ರಕ್ರಿಯೆಯಲ್ಲಿ ವ್ಯಸ್ತವಾಗಿದ್ದರೆ, ಶಿವಸೇನೆ, 'ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬೆಂಬಲ ತೆಗೆದುಕೊಳ್ಳುವ ವಿರುದ್ಧ ಬಿಜೆಪಿಗೆ ಪಕ್ಷದ ಮುಖವಾಣಿ ಸಾಮ್ನಾದ ಮೂಲಕ ಎಚ್ಚರಿಕೆ ನೀಡಿದೆ.

ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ನಡೆಯನ್ನು ಸ್ವಾಗತಿಸಿರುವ ಉದ್ಧವ್ ಠಾಕ್ರೆ ನೇತೃತ್ವದ ಸೇನೆ, ಫಡ್ನವೀಸ್ ರೈತರ ಆತ್ಮಹತ್ಯೆಗಳಿಂದ ಸದಾ ಸುದ್ದಿಯಲ್ಲಿರುವ ವಿದರ್ಭ ಮೂಲದವರಾಗಿದ್ದಾರೆ ಮತ್ತು ಎನ್‌ಸಿಪಿ ಆ ಪ್ರಾಂತ್ಯದಲ್ಲಿ ಅನೇಕ ಹಗರಣಗಳಲ್ಲಿ ಭಾಗಿಯಾದ ದಾಖಲೆಗಳಿವೆ. ಹಾಗಿರುವಾಗ ಪವಾರ್ ನೇತೃತ್ವದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿತವಾದರೆ ಪ್ರಶ್ನೆಗಳು ಹುಟ್ಟಿಕೊಳ್ಳಲಿವೆ ಎಂದು ಹೇಳಿದೆ. 
 
ಶುಕ್ರವಾರ ನಡೆಯಲಿರುವ ಹೊಸ ಮಹಾರಾಷ್ಟ್ರ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿಯ ಜತೆ ತನ್ನನ್ನು ಸೇರಿಸಿಕೊಳ್ಳಲು ಶಿವಸೇನೆ ಕೇಳಿಕೊಂಡಿದೆ ಎಂದು ವರದಿಯಾಗಿದೆ. 
 
ಮುಖ್ಯಮಂತ್ರಿ ಆಯ್ಕೆಯ ಕುರಿತ ಬಿಜೆಪಿ ನಿರ್ಧಾರ ಕುರಿತಂತೆ ಕಳೆದ ಸೋಮವಾರದಿಂದ ಬಿಜೆಪಿಯೊಂದಿಗೆ ಶಿವಸೇನೆ ಮೃದು ಧೋರಣೆಯನ್ನು ತೋರ್ಪಡಿಸಿತ್ತು  ಬಿಜೆಪಿ ಕೂಡಾ ಶಿವಸೇನೆಯೊಂದಿಗೆ ಮೃದುವಾಗಿ ವನಡೆದುಕೊಂಡಿದೆ ಎನ್ನಲಾಗಿದೆ.
 
ಮುಖ್ಯಮಂತ್ರಿ ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಅವರ ಸಚಿವ ಸಂಪುಟಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಸಿ.ವಿ. ರಾವ್ ಪ್ರಮಾಣ ವಚನ ಬೋಧಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ