ನಮ್ಮ ಅಗತ್ಯವಿದ್ದರೆ ಬಾಗಿಲಿಗೇ ಬನ್ನಿ! ಪ್ರಧಾನಿ ಮೋದಿಗೆ ಶಿವಸೇನೆ

ಬುಧವಾರ, 29 ಮಾರ್ಚ್ 2017 (12:43 IST)
ನವದೆಹಲಿ: ರಾಷ್ಟ್ರಪತಿ ಚುನಾವಣೆ ಬರುತ್ತಿದೆ. ಇದೀಗ ಕೇಂದ್ರ ಸರ್ಕಾರಕ್ಕೆ ಮಿತ್ರ ಪಕ್ಷಗಳನ್ನು ಸೆಳೆಯಲೇಬೇಕಾದ ಅನಿವಾರ್ಯತೆಯಿದೆ. ಆದರೆ ಪ್ರಮುಖ ಮಿತ್ರ ಪಕ್ಷ ಶಿವಸೇನೆ ಮತ್ತೆ ಖ್ಯಾತೆ ತೆಗೆದಿದೆ.

 

ರಾಷ್ಟ್ರಪತಿ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಮಿತ್ರ ಪಕ್ಷಗಳಿಗೆ ಔತಣಕೂಟ ನೀಡಿದ್ದರು. ಆದರೆ ಇದರಲ್ಲಿ ಶಿವಸೇನೆ ಭಾಗವಹಿಸಲಿಲ್ಲ. ಈ ಬಗ್ಗೆ ಶಿವಸೇನೆ ವಕ್ತಾರ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದಾರೆ.

 
ನಮ್ಮ ಅಗತ್ಯವಿದ್ದರೆ, ನಾಯಕ ಉದ್ಧವ್ ಠಾಕ್ರೆಯನ್ನು ನೇರವಾಗಿ ಕಂಡು ಭೇಟಿಯಾಗಲಿ ಎಂದು ರಾವತ್ ಪ್ರಧಾನಿ ಮೋದಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮಿತ್ರ ಪಕ್ಷಗಳ ಬೆಂಬಲವಿಲ್ಲದೇ ಕೇಂದ್ರ ಸರ್ಕಾರಕ್ಕೆ ತನ್ನ ಆಯ್ಕೆಯ ರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಕಷ್ಟ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ