ಕನ್ನಡಿಗರ ಬೂಟಿನಡಿ ಮರಾಠಿ ಜನರನ್ನು ತುಳಿಯಲಾಗ್ತಿದೆ: ಉದ್ಧವ್ ಠಾಕ್ರೆ

ಸೋಮವಾರ, 28 ಜುಲೈ 2014 (10:30 IST)
ಬೆಳಗಾವಿಯಲ್ಲಿ ಮರಾಠಿಗರು ಬೆಳಗಾವಿಯ ಗ್ರಾಮಗಳ ನಾಮಫಲಕಗಳನ್ನು ಕಿತ್ತು ಮಹಾರಾಷ್ಟ್ರ ಫಲಕಗಳನ್ನು ಹಾಕುತ್ತಿದ್ದರೂ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರು ಮರಾಠರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕನ್ನಡಿಗರ ಬೂಟಿನಡಿ ಮರಾಠಿ ಜನರನ್ನು ತುಳಿಯಲಾಗುತ್ತಿದೆ ಎಂದು ಸಾಮ್ನಾ ಪತ್ರಿಕೆಯಲ್ಲಿ ಬರೆದ ಸಂಪಾದಕೀಯದಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಟೀಕಿಸಿದ್ದಾರೆ.

 ಬೆಳಗಾವಿಯಲ್ಲಿರುವ ಮರಾಠಿ ಜನರಿಗೆ ಯಾವ ಸೌಲಭ್ಯವನ್ನೂ ಕೊಡಲಾಗುತ್ತಿಲ್ಲ ಎಂದು ಉದ್ಧವ್ ಠಾಕ್ರೆ ಬರೆದಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿದರೆ ಆಗ ಪರಿಸ್ಥಿತಿ ಏನಾಗುತ್ತದೆ ಎಂದು ಠಾಕ್ರೆ ಪ್ರಶ್ನೆ ಮಾಡಿದರು.  ಬೆಳಗಾಂವ್ ಕೆ ಹಫೀಜ್ ಸಯ್ಯದ್ ಎಂಬ ಸಂಪಾದಕೀಯದಲ್ಲಿ ಉದ್ಧವ್ ಠಾಕ್ರೆ ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆಯನ್ನು ಸಮರ್ಥಿಸಿಕೊಂಡರು. 
 
ಬೆಳಗಾವಿಯ ಯಳ್ಳೂರು ಗ್ರಾಮದಲ್ಲಿ ಮಹಾರಾಷ್ಟ್ರ ನಾಮಫಲಕವನ್ನು ತೆರವುಗೊಳಿಸಿದ ಬಳಿಕ ಮರಾಠಿ ಪ್ರಭಾವಿ ಗ್ರಾಮಗಳಲ್ಲಿ ಮತ್ತೆ ನಾಮಫಲಕಗಳನ್ನು ಶಿವಸೇನೆ ಕಾರ್ಯಕರ್ತರು  ನೆಡುತ್ತಿದ್ದಾರೆ. ಮರಾಠಿ ಕರಪತ್ರವನ್ನು ಕೂಡ ಅಲ್ಲಿನ ಜನರಿಗೆ ಹಂಚಲಾಗುತ್ತಿದೆ. ಯಳ್ಳೂರು ಗ್ರಾಮದಲ್ಲಿ ಮಹಾರಾಷ್ಟ್ರ ನಾಮಫಲಕ ತೆರವುಗೊಳಿಸಿದ ಬಳಿಕ ಶಿವಸೇನೆ ಕಾರ್ಯಕರ್ತರು ಕೊಲ್ಹಾಪುರದಲ್ಲಿ ಬಸ್ಸುಗಳಿಗೆ ಕಲ್ಲುತೂರಿ ಪುಂಡಾಟಿಕೆ ನಡೆಸಿದ್ದರು. 

ವೆಬ್ದುನಿಯಾವನ್ನು ಓದಿ