ಫ್ಲರ್ಟ್ ಮಾಡಲು ನಿರಾಕರಿಸಿದ್ದಕ್ಕೆ ಮಹಿಳಾ ಐಎಎಸ್ ಅಧಿಕಾರಿಗೆ ವರ್ಗಾವಣೆ ಶಿಕ್ಷೆ

ಬುಧವಾರ, 1 ಏಪ್ರಿಲ್ 2015 (17:48 IST)
ಕೆಲಸದ ಸ್ಥಳದಲ್ಲಿ ಆಕರ್ಷಣೆ, ಪ್ರೀತಿ-ಪ್ರೇಮಕ್ಕೆ ಒಳಗಾಗುವುದು ಹೊಸ ವಿಚಾರವಲ್ಲ. ಪ್ರೌಢ ಮನಸ್ಕರು ಇದನ್ನು ಸಭ್ಯ ರೀತಿಯಲ್ಲಿ ವ್ಯವಹರಿಸಲು ಪ್ರಯತ್ನಿಸುತ್ತಾರೆ. ಆದರೆ, ಇದಕ್ಕೆ ವಿರೋಧಾಭಾಸವೆಂಬಂತೆ ಉತ್ತರ ಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟ್ ಒಬ್ಬರು  ವಿವಾಹಿತ ಮಹಿಳೆಯ ಐಎಎಸ್ ಅಧಿಕಾರಿ ಮೇಲೆ ಕೇವಲ ತಮ್ಮ ಭಾವನೆಗಳನ್ನು ಒತ್ತಾಯ ಪೂರ್ವಕವಾಗಿ ಹೇರಲು ಪ್ರಯತ್ನಿಸಿದರಲ್ಲದೇ, ಆಕೆ ಅವರಿಗೆ ಸಹಮತಿ ನೀಡದಾದಾಗ  ಸೇಡನ್ನು ಸಹ ತೀರಿಸಿಕೊಂಡಿದ್ದಾರೆ. 

ವರದಿಯ ಪ್ರಕಾರ ಈಗ ರಜೆಯನ್ನು ತೆಗೆದುಕೊಂಡಿರುವ ಮಹಿಳಾ ಅಧಿಕಾರಿ ಡಿಎಮ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. 
 
ಮೂಲಗಳ ಪ್ರಕಾರ ತನ್ನ ಚೇಂಬರ್‌ನಲ್ಲೇ ಡಿಎಂ, ಮಹಿಳಾ ಅಧಿಕಾರಿಯ ಬಳಿ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಪೀಡಿತೆ ಅಧಿಕಾರಿ ಬಂಗಾಲ್ ಐಎಎಸ್ ಕೆಡರ್‌ಗೆ ಸೇರಿದ್ದು ವಿವಾಹಿತಳಾಗಿದ್ದಾಳೆ. ಡಿಎಮ್ ಬೇಡಿಕೆಯನ್ನು ತಳ್ಳಿ ಹಾಕಿದ ಅವರು ಇವೆಲ್ಲಾ ತಮಗೆ ಸರಿ ಕಾಣುವುದಿಲ್ಲ ಎಂದು ಹೇಳಿದ್ದಾರೆ. 
 
ತನ್ನ ಖಡಕ್ ಪ್ರತಿಕ್ರಿಯೆಗೆ ಡಿಎಮ್ ಸುಮ್ಮನಾಗುತ್ತಾರೆ ಎಂದು ನಿರೀಕ್ಷಿಸಿದ್ದ ಐಎಸ್ ಅಧಿಕಾರಿ ತಮ್ಮನ್ನು ಗ್ರಾಮೀಣ ಕ್ಷೇತ್ರಕ್ಕೆ ವರ್ಗಾಯಿಸಿದಾಗ ದಂಗು ಬಡಿದು ಹೋದರು. 
 
ಡಿಎಮ್‌ನ್ನು ಕಾನೂನು ಮೂಲಕ ಎದುರಿಸಲು ನಿರ್ಧರಿಸಿದ ಅವರು ರಜೆಯನ್ನು ಪಡೆದು ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದರು. 
 
ತಮ್ಮ ಮೇಲೆ ಲಿಖಿತ ದೂರು ದಾಖಲಾದ ಮೇಲೆ ಡಿಎಮ್ ಕೂಡ ರಜೆಯ ಮೇಲೆ ತೆರಳಿದ್ದಾರೆ. 
 
ದೂರಲ್ಲಿರುವುದು ಎಲ್ಲ ಸುಳ್ಳು. ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆಯಾಗಿದ್ದರಿಂದ ಬೇಸರಗೊಂಡಿರುವ ಅಧಿಕಾರಿ ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ಡಿಎಮ್ ಬೆಂಬಲಿಗರು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ