ಹಣ ದರೋಡೆಗಾಗಿ ಎಟಿಎಂಗೆ ನುಗ್ಗಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಆರೋಪಿ
ಗುರುವಾರ, 9 ಜೂನ್ 2016 (19:35 IST)
ವ್ಯಕ್ತಿಯೊಬ್ಬ ಎಟಿಎಂನಿಂದ ಹಣ ಡ್ರಾ ಮಾಡುತ್ತಿರುವಾಗ ಆರೋಪಿಯೊಬ್ಬ ಎಟಿಎಂ ಒಳಗೆ ನುಗ್ಗಿ ಮನಬಂದಂತೆ ಚಾಕುವಿನಿಂದ ಇರಿದ ಘಟನೆ ವರದಿಯಾಗಿದೆ.
ಆಘಾತಕಾರಿ ಘಟನೆಯೊಂದರಲ್ಲಿ, ಆರೋಪಿಯೊಬ್ಬ ಎಟಿಎಂ ಒಳಗ್ಗೆ ನುಗ್ಗಿ ಹಣ ಡ್ರಾ ಮಾಡುತ್ತಿದ್ದ ವ್ಯಕ್ತಿಗೆ ಹರಿತವಾದ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿ ನವೀನ್ ಪರಿಹಾರ್, ವ್ಯಕ್ತಿ ಎಟಿಎಂ ಒಳಗೆ ಪ್ರವೇಶಿಸುತ್ತಿರುವುದು ಕಂಡು, ಅಲ್ಲಿಯೇ ಹೊಂಚು ಹಾಕಿ ನಂತರ ಆತ ಹಣ ಡ್ರಾ ಮಾಡಿದ ಕೂಡಲೇ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನನಗೆ ತುರ್ತಾಗಿ ಹಣ ಬೇಕಾಗಿತ್ತು. ಆದ್ದರಿಂದ ಹಣಕ್ಕಾಗಿ ನಾನು ಆತನನ್ನು ಚಾಕುವಿನಿಂದ ಇರಿದಿದ್ದೇನೆ ಎಂದು ಆರೋಪಿ ನವೀನ್ ಪೊಲೀಸರಿಗೆ ತಿಳಿಸಿದ್ದಾನೆ,
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.