ಅಶ್ಲೀಲ್‌ ವೆಬ್‌ಸೈಟ್‌ಗಳನ್ನು ಬಂದ್ ಮಾಡಿ: ಸರಕಾರಕ್ಕೆ ಸುಪ್ರೀಂ

ಶುಕ್ರವಾರ, 29 ಆಗಸ್ಟ್ 2014 (16:52 IST)
ಇಂಟರ್ನೆಟ್ ನಲ್ಲಿ ಅಶ್ಲೀಲತೆಯ ನಿಯಂತ್ರಣಕ್ಕಾಗಿ ಕಾನೂನು, ತಾಂತ್ರಕತೆ ಮತ್ತು ಆಡಳಿತ ಸೇರಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ತಿಳಿಸಿದೆ. ಆದರೆ, ಸರ್ವರ್ ವಿದೇಶಗಳಲ್ಲಿ ಅಪರೇಟ್‌ ಆಗುತ್ತಿರುವುದರಿಂದ ಇವುಗಳನ್ನು ನಿಲ್ಲಿಸಲು ಕಷ್ಟವಾಗುತ್ತದೆ ಎಂದು ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 
 
ವಿದೇಶದಿಂದ ಅಶ್ಲೀಲ ಸರ್ವರ್ ಅಪರೇಟ್ ಆಗುತ್ತಿದೆ ಮತ್ತು ವಿದೇಶಗಳಿಂದ ಸರ್ವರ್ ತರುವ ಪ್ರಯತ್ನ ಮಾಡಲಾಗುತ್ತಿದೆ. ಸರ್ವರ್ ಭಾರತದಲ್ಲಿಲ್ಲದ ಕಾರಣ ಅಶ್ಲೀಲ ವೆಬ್‌ಸೈಟ್‌‌ ಮೇಲೆ ಕಂಟ್ರೋಲ್ ಮಾಡುವುದು ಕಷ್ಟವಿದೆ, ಆದರೆ ವಿದೇಶಗಳಿಂದ ಸರ್ವರ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ. 
 
ಈ ಕುರಿತು ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್‌ ಸರಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ